ಮದ್ಯದಂಗಡಿಗೆ ವಿರೋಧ
ಶಿವಮೊಗ್ಗ: ಶಿಕಾರಿಪುರ ತಾಲೂಕು ಕಪ್ಪನಹಳ್ಳಿಯಲ್ಲಿ ಮದ್ಯದಂಗಡಿ ತೆರೆಯದಂತೆ ಒತ್ತಾಯಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಮದ್ಯಪಾನದಿಂದ ಗ್ರಾಮದಲ್ಲಿ ಗಲಭೆ ಹೆಚ್ಚಾಗುತ್ತಿವೆ. ಓದುವ ಮಕ್ಕಳಿಗೆ ತೊಂದರೆಯಾಗುತ್ತಿದೆ. ತಂದೆತಾಯಿಯೇ ಮಕ್ಕಳನ್ನು ಮದ್ಯದಂಗಡಿಗೆ ಕಳುಹಿಸಿ ಮದ್ಯ ತರಲು ಹೇಳುತ್ತಿದ್ದಾರೆ.
ಇದರಿಂದ ಮಕ್ಕಳ ವಿದ್ಯಾಭ್ಯಾಸ ಕುಂಠಿತವಾಗುತ್ತಿದೆ. ಮನೆಯಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಕೆಲವು ಕಿಡಿಗೇಡಿಗಳ ಕುಮ್ಮಕ್ಕಿನಿಂದ ಸೊರಬ ತಾಲೂಕಿಗೆ ಸಂಬಂಧಿಸಿದ ಪರವಾನಗಿ ಬಳಸಿ ಗ್ರಾಮದಲ್ಲಿ ಮದ್ಯದಂಡಗಿ ತೆರೆಯಲು ಹೊರಟಿದ್ದಾರೆ. ಆದ್ದರಿಂದ ಯಾವ ಕಾರಣಕ್ಕೂ ಮದ್ಯದಂಗಡಿ ತೆರೆಯಬಾರದು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಪುಷ್ಪ, ರೇಣುಕಾ, ಸಾವಿತ್ರಮ್ಮ, ಓಂಕಾರಮ್ಮ, ಸಾವಿತ್ರಮ್ಮ, ಭಾಗ್ಯ ಸೇರಿದಂತೆ ಹಲವರು ಇದ್ದರು.