ಶಿಕ್ಷಕರ ಸಂಘದ ಪದಾಧಿಕಾರಿಗಳ ಆಯ್ಕೆ
ತರೀಕೆರೆ: ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಸಹ ಶಿಕ್ಷಕ ಎಂ.ಕುಮಾರ್ (ಅಧ್ಯಕ್ಷ), ಬಾಲಕಿಯರ ಸರ್ಕಾರಿ ಪಪೂ ಕಾಲೇಜಿನ ಎಂ.ನೀಲಕಂಠಪ್ಪ (ಪ್ರಧಾನ ಕಾರ್ಯದರ್ಶಿ), ಬೆಟ್ಟದಹಳ್ಳಿ ಜೆಪಿಎನ್ ಪ್ರೌಢಶಾಲೆ ಎಚ್.ಡಿ.ಪ್ರಕಾಶ್ (ಖಜಾಂಚಿ), ರಂಗೇನಹಳ್ಳಿ ಸರ್ಕಾರಿ ಪ್ರೌಢಶಾಲೆ ಸಹ ಶಿಕ್ಷಕ ಈ.ಎಸ್. ನಾಗರಾಜ್ (ರಾಜ್ಯ ಪರಿಷತ್ ಸದಸ್ಯ) ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಚಂದ್ರಯ್ಯ ತಿಳಿಸಿದ್ದಾರೆ.