ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಹಳೇಮೂಡಿಗೆರೆಯಲ್ಲಿ ಗ್ರಾಮ ಸುಭೀಕ್ಷಾ ಕಾರ್ಯಕ್ರಮ

Rashmi Kasaragodu
Updated On : 28 Jul 2014, 11:09 am

ಮೂಡಿಗೆರೆ: ಗ್ರಾಮಗಳ ಸುಭೀಕ್ಷತೆಯೆಂದರೆ ಅಲ್ಲಿ ಕೇವಲ ರಸ್ತೆ, ಕುಡಿವ ನೀರು, ಚರಂಡಿ, ವಿದ್ಯುತ್ ಸಂಪರ್ಕದಂತಹ ಮೂಲ ಸೌಕರ್ಯಗಳಿದ್ದರಷ್ಟೇ ಸಾಲದು. ಜೂಜಾಟ, ಇಸ್ಪೀಟ್, ಕುಡಿತದ ದುಶ್ಚಟಗಳಿಂದ ಮುಕ್ತವಾಗದ ಗ್ರಾಮದಲ್ಲಿ ಸುಭೀಕ್ಷೆ ನೆಲೆಸಲು ಸಾಧ್ಯವಿಲ್ಲ ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಚಿಪ್ರಗುತ್ತಿ ಪ್ರಶಾಂತ್ ಹೇಳಿದರು.
ಭಾನುವಾರ ಹಳೇಮೂಡಿಗೆರೆ ಗಣಪತಿ ದೇವಸ್ಥಾನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವಸಹಾಯ ಸಂಘಗಳಿಂದ ಏರ್ಪಡಿಸಿದ್ದ ಗ್ರಾಮ ಸುಭೀಕ್ಷಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯೆಗೂ ಶಿಕ್ಷಣಕ್ಕೂ ವ್ಯತ್ಯಾಸವಿದೆ. ಕೇವಲ ಶಿಕ್ಷಣದಿಂದ ವ್ಯಕ್ತಿಯ ಪರಿಪೂರ್ಣತೆ ಸಾಧ್ಯವಿಲ್ಲ. ಶಿಕ್ಷಣವಂತರಾಗಿ ಉನ್ನತ ಹುದ್ದೆಗೇರಿದವರೇ ಇಂದು ಕೊಲೆ, ಸುಲಿಗೆ ಮಾಡುವುದನ್ನು ಕಾಣುತ್ತಿದ್ದೇವೆ. ಕೇವಲ ಕಾನೂನಿನಿಂದ ಜನರು ಪರಿವರ್ತನೆ ಹೊಂದಲು ಸಾಧ್ಯವಿಲ್ಲ ಎಂದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಎಂ.ಆರ್.ಜಗದೀಶ್ ಕಾರ್ಯಕ್ರಮ ಉದ್ಘಾಟಿಸಿದರು. ತಾಪಂ ಸದಸ್ಯ ಎ.ಜಿ.ಸುಬ್ರಾಯಗೌಡ, ಹಳೇಮೂಡಿಗೆರೆ ಗ್ರಾಪಂ ಅಧ್ಯಕ್ಷ ರವಿ, ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಲೀಲಾವತಿ, ಶಾಂತಿ, ವಲಯ ಅಧ್ಯಕ್ಷೆ ರೇಣುಕಾ, ಜ್ಯೋತಿ, ರುಕ್ಮಿಣಿ, ಕೃಷ್ಣಪ್ಪ, ಲತಾ, ಅನ್ನಪೂರ್ಣ ಧರ್ಮೇಶ್ , ದೇವಸ್ಥಾನ ಸಮಿತಿ ರಾಜು, ಮಂಜುನಾಥ್, ನಾಗರಾಜ್, ಶಂಕ್ರೇಗೌಡ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement