ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ನಗರದಲ್ಲಿ ವಿದ್ಯುತ್ ನಿರ್ವಹಣೆಗೆ ಕ್ರಮ: ನಗರಸಭೆ ಅಧ್ಯಕ್ಷ ಪುಷ್ಪರಾಜ್

Rashmi Kasaragodu
Updated On : 29 Jul 2014, 10:47 am

ಚಿಕ್ಕಮಗಳೂರು: ನಗರದಲ್ಲಿ ಬೀದಿ ದೀಪ ನಿರ್ವಹಣೆ ಕುರಿತಂತೆ ಎರಡು ಪ್ರತ್ಯೇಕ ಟೆಂಡರ್ ಕರೆದು ಇಂದಿನಿಂದ ಕಾರ್ಯನಿರ್ವಹಣೆ ಮಾಡಲು ಸೂಚಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷ ಕೆ.ಎಸ್. ಪುಷ್ಪರಾಜ್ ತಿಳಿಸಿದ್ದಾರೆ. ಅವರು ಸೋಮವಾರ ನಗರಸಭೆ ಕಚೇರಿ ಮುಂದೆ ಸಂಬಂಧಪಟ್ಟವರಿಗೆ ಟ್ಯೂಬ್‌ಲೈಟ್ ಸೇರಿದಂತೆ ವಿದ್ಯುತ್ ಪರಿಕರಗಳನ್ನು ಹಸ್ತಾಂತರಿಸಿ ಮಾತನಾಡಿದರು.
ನಗರಸಭೆ ವ್ಯಾಪ್ತಿಯ 35 ವಾರ್ಡ್‌ಗಳ ಬೀದಿ ದೀಪ ನಿರ್ವಹಣೆ ಕುರಿತಂತೆ ಎರಡು ಪ್ರತ್ಯೇಕ ತಂಡ ರಚಿಸಲಾಗಿದೆ. 1ನೇ ವಾ ರ್ಡ್‌ನಿಂದ 15 ರವರೆಗೆ ಮತ್ತು 17 ನೇ ವಾರ್ಡ್ ಒಂದು ತಂಡ ಹಾಗೂ 16 ರಿಂದ 20 ಮತ್ತು 23 ರಿಂದ 35 ವಾರ್ಡ್‌ಗೆ ಮತ್ತೊಂದು ತಂಡವನ್ನು ಬಿಡಲಾಗಿದ್ದು, ಬೆಂಗಳೂರಿನ ಎ.ವೈ.ಆರ್. ಎಂಟರ್ ಪ್ರೈಸಸ್‌ಗೆ ನಿರ್ವಹಣೆ ಜವಾಬ್ದಾರಿಯನ್ನು ಟೆಂಡರ್ ಮೂಲಕ ನೀಡಲಾಗಿದೆ ಎಂದರು.
ಪ್ಯಾಕೇಜ್ ಸಂಖ್ಯೆ ಒಂದನ್ನು ರು. 19 ಲಕ್ಷ ಮತ್ತು ಪ್ಯಾಕೇಜ್ ಸಂಖ್ಯೆ ಎರಡನ್ನು ರು. 18.10 ಲಕ್ಷಕ್ಕೆ ವಾರ್ಷಿಕ ಟೆಂಡರ್ ನಿರ್ವಹಣೆ ವಹಿಸಲಾಗಿದ್ದು, ಸಾರ್ವಜನಿಕರಿಂದ ಯಾವುದೇ ದೂರು ಬರದಂತೆ ಎಚ್ಚರಿಕೆ ವಹಿಸಿ ಕಾರ್ಯ ನಿರ್ವಹಿಸುವಂತೆ ಟೆಂಡರ್‌ದಾರರಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ನಗರಸಭೆ ಉಪಾಧ್ಯಕ್ಷ ಅಪ್ಸರ್ ಅಹಮದ್, ಸದಸ್ಯ ದೇವರಾಜ ಶೆಟ್ಟಿ, ಎಚ್.ಎಸ್. ಪುಟ್ಟಸ್ವಾಮಿ, ನರಸಿಂಹ, ಮುಖಂಡ ಯತಿರಾಜ್ ನಾಯ್ಡ್, ಶ್ರೀಧರ್ ಉರಾಳ್ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement