ಶಿಕ್ಷಕರ ಸಂಘಕ್ಕೆ ಅವಿರೋಧ ಆಯ್ಕೆ
ಸಾಗರ: ಇಲ್ಲಿನ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘಕ್ಕೆ ನಡೆದ ಚುನಾವಣೆಯಲ್ಲಿ 8 ಜನರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಹುಲಿದೇವರಬನ ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕ ಮಲ್ಲಿಕಾರ್ಜುನ ಗೌಡ, ಕಾರ್ಗಲ್ ಸರ್ಕಾರಿ ಪ್ರೌಢಶಾಲೆ ಸಹ ಶಿಕ್ಷಕ ಲಕ್ಷ್ಮಣ ಆರ್. ನಾಯ್ಕ್, ಎಂಜಿಎನ್ ಪೈ ಪ್ರೌಢಶಾಲೆ ಸಹಶಿಕ್ಷಕ ವೀರಭದ್ರಪ್ಪ ಜಿ.ಆರ್., ಸಾಗರ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಹಶಿಕ್ಷಕ ಮಹೇಶ್ ಕೆ.ವಿ., ಚಂದ್ರಶೇಖರ್ ಡಿ., ಕಾನ್ಲೆ ಸರ್ಕಾರಿ ಪ್ರೌಢಶಾಲೆ ಸಹಶಿಕ್ಷಕ ಪರಶುರಾಮಪ್ಪ ಬಿ., ಮಾಸೂರು ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕ ಫ್ರಾಂಕಿ ಫ್ರಾನ್ಸಿಸ್ ಹಾಗೂ ಸಿರಿವಂತೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಹಶಿಕ್ಷಕ ಲಕ್ಷ್ಮಣಪ್ಪ ಬಿ.ಟಿ. ಆಯ್ಕೆ ಆಗಿದ್ದಾರೆ ಎಂದು ಚುನಾವಣಾಧಿಕಾರಿ ಕೆ.ಎನ್. ಗಾವಡಿ ತಿಳಿಸಿದ್ದಾರೆ.
ಲಗೇಜ್ ಆಟೋ ಚಲಿಸಿ ಮಹಿಳೆ ಸಾವು
ಶಿರಾಳಕೊಪ್ಪ: ಪಟ್ಟಣದ ಚೆನ್ನಮಲ್ಲಿಕಾರ್ಜುನ ಶಾಲೆ ಬಳಿ ರಸ್ತೆ ಬದಿ ತಡಗಣಿಗೆ ಹೊರಟಿದ್ದ ನೀಲಮ್ಮ (35) ಎಂಬವರ ಮೇಲೆ ಲಗೇಜ್ ಆಟೋ ಚಲಿಸಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಿರಾಳಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.