ಪತ್ರಿಕೆ ಪ್ರಜಾಪ್ರಭುತ್ವದ ಕಾವಲುಗಾರ: ಪ್ರೊ. ಲಿಂಗಪ್ಪ
ತರೀಕೆರೆ: ಪತ್ರಿಕೆಗಳು ಪ್ರಜಾಪ್ರಭುತ್ವದ ಕಾವಾಲುಗಾರ ಇದ್ದಂತೆ ಎಂದು ಪಟ್ಟಣದ ಎಸ್.ಜೆ.ಎಂ.ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಪ್ರೊ. ಲಿಂಗಪ್ಪ ತಿಳಿಸಿದರು.
ಅವರು, ಬುಧವಾರ ತಾಲೂಕು ಪತ್ರಕರ್ತರ ಸಂಘದಿಂದ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿವಮೊಗ್ಗ ಸಹ್ಯಾದ್ರಿ ಕಾಲೇಜು ಪ್ರಾಧ್ಯಾಪಕ ಡಾ. ಮಹದೇವಸ್ವಾಮಿ, ಸ್ವಾತಂತ್ರ್ಯದ ಆಶಯ ಮತ್ತು ದಮನವಾಗುತ್ತಿರುವ ಪತ್ರಿಕಾ ಸ್ವಾತಂತ್ರ ಎಂಬ ವಿಷಯ ಕುರಿತು ಮಾತನಾಡಿ, ಮೊಬೈಲ್ ಸದ್ಬಳಕೆಯಾಗಬೇಕು, ಸಾಮಾಜಿಕ ಪರಿವರ್ತನೆಯಾಗಬೇಕು ಎಂದರು.
ಪತ್ರಕರ್ತ ಎಚ್.ಬಿ.ರಾಘವೇಂದ್ರ, ಪುರಸಭೆ ಪ್ರಭಾರಿ ಅಧ್ಯಕ್ಷೆ ಪುಟ್ಟಮ್ಣ ಅಣ್ಣಯ್ಯ, ಉದ್ಯಮಿ ದೋರನಾಳು ಪರಮೇಶ್, ಸಮಾಜ ಸೇವಕ ಹುಣಸಘಟ್ಚದ ಎಚ್.ಎಂ. ಗೋಪಿಕೃಷ್ಣ ಮಾತನಾಡಿದರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಸುರೇಶ್ ಚಂದ್ರ ಅಧ್ಯಕ್ಷತೆ ವಹಿಸಿದ್ದರು. ಉಡೇವ ಪತ್ರಕರ್ತ ಶ್ರೀನಿವಾಸ್ ಅವರನ್ನು ಸನ್ಮಾನಿಸಲಾಯಿತು.
ಪ್ರೊ. ಬಸವರಾಜ್, ಪ್ರೊ. ಬಿ.ಆರ್. ಡಮ್ಮಳ್ಳಿ, ಪ್ರೊ. ಹೆಗಡಾಳ್, ಎ.ಆರ್.ಕೆ. ಶ್ರೀನಿವಾಸ್, ಜಿ.ಟಿ. ರಮೇಶ್, ದಾದಪೀರ್, ಶ್ರೀನಿವಾಸರಾವ್, ಬಸವರಾಜ್, ಕೃಷ್ಣಮೂರ್ತಿ, ಜಿ. ಸುಬ್ರಹ್ಮಣ್ಯ, ಸಿದ್ರಾಮಪ್ಪ, ನಾಗರಾಜ್,ಅಣ್ಣಪ್ಪ, ಜಗದೀಶ್, ನಾಗೇಂದ್ರಪ್ಪ, ವಿಕಾಸ್, ಕೆ.ಆರ್. ರಮೇಶ್, ಪತ್ರಕರ್ತರ ಸಂಘದ ಸದಸ್ಯರು ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಿದ್ದರು. ದಾದಪೀರ್ ಸ್ವಾಗತಿಸಿದರು. ಜಿ. ಸುಬ್ರಹ್ಮಣ್ಯ ನಿರೂಪಿಸಿದರು. ಎ.ಆರ್.ಕೆ.ಶ್ರೀನಿವಾಸ್ ವಂದಿಸಿದರು.