ತರೀಕೆರೆ-ಶಿವಮೊಗ್ಗ ಬಿಜೆಪಿ ಪಾದಯಾತ್ರೆ
ತರೀಕೆರೆ: ತರೀಕೆರೆಯಿಂದ ಶಿವಮೊಗ್ಗಕ್ಕೆ 40 ಕಿಮೀ ಪಾದಯಾತ್ರೆ ಹೊರಟ ಬಿಜೆಪಿ ಕಾರ್ಯಕರ್ತ ದೀಪಕ್ ಯಾನೆ ಹರೀಶ್ ಅವರಿಗೆ ಸಾಲು ಮರದಮ್ಮನವರ ದೇವಸ್ಥಾನದ ಬಳಿ ಪಕ್ಷದ ಕಾರ್ಯಕರ್ತರಿಂದ ಭಾನುವಾರ ಬೀಳ್ಕೊಡುಗೆ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ದೀಪಕ್ ಯಾನೆ ಹರೀಶ್ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸಿ ಕೇಂದ್ರದಲ್ಲಿ ನರೇಂದ್ರ ಮೋದಿ ಪ್ರಧಾನಿಗಳಾದರೆ ತರೀಕೆರೆಯಿಂದ ಶಿವಮೊಗ್ಗಕ್ಕೆ ಪಾದಯಾತ್ರೆ ಮಾಡುತ್ತೇನೆ ಎಂದು ಧರ್ಮಸ್ಥಳ ಮಂಜುನಾಥ ಸ್ವಾಮಿಯಲ್ಲಿ ಈ ಮುಂಚೆ ಸಂಕಲ್ಪ ಮಾಡಿದ್ದು, ಅದರಂತೆ ಇದೀಗ ಶಿವಮೊಗ್ಗಕ್ಕೆ ಪಾದಯಾತ್ರೆ ಹೊರಟಿರುವುದಾಗಿ ತಿಳಿಸಿದರು.
ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಎನ್. ಮಂಜುನಾಥ್, ಜಿಲ್ಲಾ ಬಿಜೆಪಿ
ಉಪಾಧ್ಯಕ್ಷ ಆರ್. ದೇವಾನಂದ್, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಟಿ.ಜಿ. ಸದಾನಂದ್ ಟಿ.ಆರ್. ಕುಮಾರ್, ಶಿವಮೂರ್ತಿ, ನಾಗರಾಜ್, ಪ್ರಸನ್ನ, ಶ್ರೇಯಸ್ಸು, ಪಕ್ಷದ ಕಾರ್ಯಕರ್ತರು ದೀಪಕ್ ಯಾನೆ ಹರೀಶ್ ಅವರಿಗೆ ಶುಭ ಕೋರಿದರು.