ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ನಾಲ್ವರ ವಜಾ, ನಾಲ್ವರಿಗೆ ಹಿಂಬಡ್ತಿ

Lingaraj Badiger
Updated On : 3 Jun 2014, 11:37 am

ಕುವೆಂಪು ವಿವಿ: ಉತ್ತರ ಪತ್ರಿಕೆ ಅಕ್ರಮ: ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನ
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದಲ್ಲಿ ನಡೆದಿದ್ದ ಉತ್ತರ ಪತ್ರಿಕೆ ಅಕ್ರಮದಲ್ಲಿ ಪಾಲ್ಗೊಂಡ ಎಂಟು ಮಂದಿ ವಿರುದ್ಧ ವಿಶ್ವವಿದ್ಯಾಲಯ ದಿಟ್ಟ ಕ್ರಮ ಕೈಗೊಂಡಿದೆ.
ಅಕ್ರಮದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಾಲ್ವರನ್ನು ಸೇವೆಯಿಂದ ವಜಾ ಮಾಡಿದೆ. ಅದೇ ರೀತಿ ಮತ್ತೆ ನಾಲ್ವರಿಗೆ ಹಿಂಬಡ್ತಿ ಶಿಕ್ಷೆ ನೀಡಿ ಸೇವೆಯಲ್ಲಿ ಮುಂದುವರಿಸಲಾಗಿದೆ. ಜ್ಞಾನ ಸಹ್ಯಾದ್ರಿಯಲ್ಲಿ ನಡೆದ ಕುವೆಂಪು ವಿಶ್ವವಿದ್ಯಾಲಯ ಸಿಂಡಿಕೇಟ್ ವಿಶೇಷ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಂಡಿಕೇಟ್ ಸಮಿತಿ ಆಂತರಿಕ ತನಿಖೆ ಕೈಗೊಂಡು ವರದಿ ನೀಡಿತ್ತು. ಹಾಗೆಯೇ ವಿಶ್ವವಿದ್ಯಾಲಯ ಶಿಸ್ತು ಜಾರಿಗೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ತಡಾಲ್ ನೇತೃತ್ವದ ಏಕ ಸದಸ್ಯ ಸಮಿತಿ ರಚಿಸಿ ವರದಿ ಅಪೇಕ್ಷಿಸಲಾಗಿತ್ತು. ವಿಶ್ವವಿದ್ಯಾಲಯ ಸೇವಾ ನಿಯಮಾವಳಿಗಳ ಅನ್ವಯ ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸಮಿತಿ ಶಿಫಾರಸು ಮಾಡಿತ್ತು.
ಪರೀಕ್ಷಾಂಗ ವಿಭಾಗದಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ ಸಿದ್ದಾಚಾರ್ಯ, ರಮೇಶ ನಾಯ್ಕ, ಶಿವಕುಮಾರ್, ರಾಮು ಅವರ ಮೇಲಿನ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಅವರನ್ನು ಸೇವೆಯಿಂದ ವಜಾಗೊಳಿಸುವ ತೀರ್ಮಾನಕ್ಕೆ ಬರಲಾಗಿದೆ.
ಅಲ್ಲದೆ, ಕ್ರಿಮನಲ್ ಮೊಕದ್ದಮೆಯಲ್ಲಿ ಹೆಸರಿಲ್ಪಟ್ಟಿದ್ದು, ಅಕ್ರಮದಲ್ಲಿ ಭಾಗಿದ್ದಾರೆಂಬ ಹಿನ್ನೆಲೆಯಲ್ಲಿ ಪಾಲಾಕ್ಷನಾಯ್ಕ(ಸಹಾಯಕ ರಿಜಿಸ್ಟ್ರಾರ್), ಜೆ. ಪೀರ್ಯನಾಯ್ಕ (ಹಿರಿಯ ಸಹಾಯಕ), ಮದನ್ ಮತ್ತು ತಿಮ್ಮಯ್ಯ(ದ್ವಿತೀಯ ದರ್ಜೆ ಸಹಾಯಕ) ಇವರಿಗೆ ಹಿಂಬಡ್ತಿ ನೀಡಲು ನಿರ್ಣಯಿಸಲಾಯಿಸಲಾಯಿತು. ಸಹಾಯಕ ರಿಜಿಸ್ಟ್ರಾರ್ ಆಗಿರುವ ಪಾಲಾಕ್ಷ ನಾಯ್ಕ ಅಧೀಕ್ಷಕರಾಗಿ, ಹಿರಿಯ ಸಹಾಯಕ ಪೀರ್ಯನಾಯ್ಕ ಪ್ರಥಮ ದರ್ಜೆ ಗುಮಾಸ್ತರಾಗಿ, ಮತ್ತು ದ್ವಿತೀಯ ದರ್ಜೆ ಸಹಾಯಕರಾಗಿದ್ದ ಮದನ್ ಮತ್ತು ತಿಮ್ಮಯ್ಯ ಇನ್ನು ಮುಂದೆ ಅಟೆಂಡರ್ ಆಗಿ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ.
ಉತ್ತರ ಪತ್ರಿಕೆಗಳ ಹಗರಣಕ್ಕೆ ಸಂಬಂಧಪಟ್ಟಂತೆ ಒಟ್ಟು 9 ಜನರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಈ ಪೈಕಿ ಒಬ್ಬ ಆರೋಪಿ ದೂದ್ಯ ನಾಯ್ಕ ಮೃತಪಟ್ಟಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement