ಹಾಲು ಉತ್ಪಾದಕರ ಘಟಕಕ್ಕೆ ಆಯ್ಕೆ
ತರೀಕೆರೆ: ಹಾಸನ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನಿರ್ದೇಶಕರಾಗಿ ಹೊಸೂರು ಮಲ್ಲೇನಹಳ್ಳಿಯ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಎಚ್.ಜೆ. ಚೈತ್ರ ಷಣ್ಮಖಪ್ಪ ಅವರನ್ನು ಮಹಿಳಾ ಸಹಕಾರ ಸಂಘಗಳ ಕ್ಷೇತ್ರದಿಂದ ಆಯ್ಕೆ ಮಾಡಲಾಗಿದೆ.
ತಾಲೂಕಿನಲ್ಲಿ ಇದುವರೆಗೆ ಮಹಿಳಾ ವಿಭಾಗದಿಂದ ಆವಿರೋಧವಾಗಿ ಆಯ್ಕೆಗೊಂಡ ಪ್ರಥಮ ಒಕ್ಕೂಟದ ನಿರ್ದೇಶಕರಾಗಿದ್ದಾರೆ ಎಂದು ಒಕ್ಕೂಟದ ಚುನಾವಣಾಧಿಕಾರಿ ಬಿ. ಶರತ್ ಘೋಷಿಸಿದ್ದಾರೆ.
ಮಹಿಳಾ ಸಂಘಗಳಿಗೆ ಆದ್ಯತೆ: ನಿರ್ದೇಶಕರಾಗಿ ಆಯ್ಕೆಗೊಂಡ ಸುದ್ದಿಗಾರರೊಡನೆ ಮಾತನಾಡಿದ ನೂತನ ಅಧ್ಯಕ್ಷೆ, ಮುಂದಿನ ಐದು ವರ್ಷಗಳಲ್ಲಿ ಅತಿ ಹೆಚ್ಚು ಸಹಕಾರ ಸಂಘಗಳನ್ನು ಸ್ಥಾಪಿಸಲು ಒತ್ತು ನೀಡಲಾಗುವುದು. ಗ್ರಾಮಾಂತರ ಪ್ರದೇಶ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಲು ಸಹಕಾರಿಯಾಗುವಂತೆ
ಒಕ್ಕೂಟದಿಂದ ಎಲ್ಲ ಅಗತ್ಯ ನೆರವುಗಳ ಜೊತೆಯಲ್ಲಿ ಸಮರ್ಪಕ ಸೌಲಭ್ಯಗಳನ್ನು ಒದಗಿಸಲು ಹಿರಿಯ ನಿರ್ದೇಶಕ ಎಸ್.ಎಲ್. ಧರ್ಮೇಗೌಡರ ಮಾರ್ಗದರ್ಶನದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದ್ದಾರೆ.