ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಫ್ಲಾರೆನ್ಸ್ ನೈಂಟಿಗೇಲ್ ದಿನಾಚರಣೆ

Lingaraj Badiger
Updated On : 4 Jun 2014, 11:24 am

ಚಿಕ್ಕಮಗಳೂರು: ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಜಿಲ್ಲಾ ಶುಶ್ರೂಷಕರ ಸಂಘದ ವತಿಯಿಂದ ಪ್ಲಾರೆನ್ಸ್ ನೈಂಟಿಗೇಲ್ ದಿನಾಚರಣೆ ಸೋಮವಾರ ನಡೆಯಿತು.
ಸಮಾರಂಭ ಉದ್ಘಾಟಿಸಿ ಮಾತನಾಡಿದ ವಿಧಾನಪರಿಷತ್ ಸದಸ್ಯೆ ಗಾಯಿತ್ರಿ ಶಾಂತೇಗೌಡ, ಶುಶ್ರೂಷಕರ ಬೇಡಿಕೆ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ತಿಳಿಸಿದರು.
ಶಾಸಕ ಸಿ.ಟಿ. ರವಿ ಅವರು 12 ಜನ ಶುಶ್ರೂಷಕಯರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಶುಶ್ರೂಷಕರ ವೃತ್ತಿ ಮತ್ತು ಪ್ಲಾರೆನ್ಸ್ ನೈಂಟಿಗೇಲ್ ಅವರ ಕಾರ್ಯಕ್ಷಮತೆಯಿಂದ ಇನ್ನು ಜೀವಂತವಾಗಿದೆ. ಶುಶ್ರೂಷಕರ ಸಂಘ ಇರುವರೆಗೂ ಅವರ ಹೆಸರು ಅಜರಾಮರವಾಗಿರುತ್ತದೆಂದು ಗುಣಗಾನ ಮಾಡಿದರು.
ಜಿಲ್ಲಾ ಸರ್ಜನ್ ಡಾ. ದೊಡ್ಡಮಲ್ಲಪ್ಪ ಅವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿದರು. ಸಮಾರಂಭದಲ್ಲಿ ಎ. ಬಾಲಕ್ಕ, ಕೆ.ಕೆ. ಶಾರದ, ಮೇರಿ ವ್ಯಾಸ್, ಸಿ.ಎಂ. ರೋಸಾ, ಎ. ನಾಗರತ್ನ, ಪಿ.ಡಿ. ಚೆಲುವಾಡಿ, ಸುಲೋಚನ, ದಾಕ್ಷಾಯಿಣಿ, ರಾಧಾ, ಲಕ್ಷ್ಮೀ ರೈ, ಜಯಾ ಹಾಗೂ ರಜನಿ ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶುಶ್ರೂಷಕರ ಸಂಘದ ಅಧ್ಯಕ್ಷೆ ಜಯಲಕ್ಷ್ಮಿ ಮಾತನಾಡಿ, ಶುಶ್ರೂಷಕರ ಕುಂದುಕೊರತೆ ಬಗ್ಗೆ ಮತ್ತು ಶುಶ್ರೂಷಕರ ಕರ್ತವ್ಯ ನಿರ್ವಹಣೆಯಲ್ಲಾಗುವ ಅಡಚಣೆ ಕುರಿತು ಪ್ರಸ್ತಾಪಿಸಿದರು.
 ಕೇಂದ್ರ ಸಂಘದ ಅಧ್ಯಕ್ಷೆ ಭೈರಮ್ಮ ಹಾಗೂ ಇತರ ಪದಾಧಿಕಾರಿಗಳು ಮತ್ತು ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement