ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ಜನಸೇವೆಗೆ ಅಧಿಕಾರ ಅನಿವಾರ್ಯವಲ್ಲ'

Mainashree
Updated On : 7 Jun 2014, 10:30 am

ಕ.ಪ್ರ.ವಾರ್ತೆ  ಚಿಕ್ಕಮಗಳೂರು  ಜೂ.6
ರಾಜಕಾರಣದಲ್ಲಿ ಸ್ಥಾನಮಾನ, ಗೌರವಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವುದು ಸೂಕ್ತ ಎಂದು ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ತಾಲೂಕಿನ ನಿಡಘಟ್ಟದಲ್ಲಿ ಶುಕ್ರವಾರ ಸಖರಾಯಪಟ್ಟಣ ಬ್ಲಾಕ್‌ನ ಕಾರ್ಯಕರ್ತರಿಗೆ ಹಮ್ಮಿಕೊಂಡಿದ್ದ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದ ಅವರು, ಜನಸಾಮಾನ್ಯರ ಕೆಲಸ ಮಾಡಲಿಕ್ಕೆ ಅಧಿಕಾರ, ಸ್ಥಾನಮಾನದ ಅವಶ್ಯಕತೆ ಬೇಕಾಗಿಲ್ಲ. ನಮಗಿರುವ ಗೌರವ ಉಳಿಸಿ, ಬಳಸಿಕೊಂಡು ನಿಮ್ಮ ಸೇವೆ ಮಾಡುವುದಾಗಿ ತಿಳಿಸಿದರು.
ಬಯಲುಸೀಮೆಯ ಜನರ ಪ್ರಮುಖ ಬೇಡಿಕೆ ಆಗಿರುವ ಕರಗಡ ನೀರಾವರಿ ಯೋಜನೆ ಬಗ್ಗೆ ನೀವು ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ಚ್ಯುತಿ ಬಾರದಂತೆ ಸಹಕಾರ ನೀಡಿದೆ. ಅದು ಪೂರ್ಣಗೊಳಿಸುವ ಸಂಬಂಧ ಮತ್ತು ಹೆಬ್ಬೆ ನೀರಿನ ಯೋಜನೆ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಗ್ರಾಮಾಂತರ ಪ್ರದೇಶದ ಜನರ ಬಾಯಾರಿಕೆ ನೀಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ನನ್ನ ಪ್ರಾಮಾಣಿಕತೆ ಮೆಚ್ಚಿ ಮತ ನೀಡಿದವರಿಗೆ ಕೃತಜ್ಞತೆ ಸಲ್ಲಿಸಲು ಈ ಕಾರ್ಯಕ್ರಮ ನಡೆಸಲಾಗಿದೆ. ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಿ ಮುಂಬರುವ ದಿನಗಳಲ್ಲಿ ಒಗ್ಗಟ್ಟಾಗಿ ಸಂಘಟನೆ ಬಲಪಡಿಸೋಣ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಡಿ.ಎಲ್. ವಿಜಯಕುಮಾರ್, ಮುಖಂಡರಾದ ಬಿ.ಎಂ. ಸಂದೀಪ್, ಶಾಂತೇಗೌಡ, ಬ್ಲಾಕ್ ಅಧ್ಯಕ್ಷ ಕಲ್ಮರುಡಪ್ಪ, ಶ್ರೀನಿವಾಸ್‌ಗೌಡ, ಹೇಮಾವತಿ, ಚಂದ್ರೇಗೌಡ, ಉಮೇಶ್, ಚಂದ್ರಶೇಖರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement