ರಕ್ತದಾನ ಶಿಬಿರ 21, 23ರಂದು
ಚಿಕ್ಕಮಗಳೂರು: ವಿಶ್ವ ರಕ್ತದಾನಿಗಳ ದಿನಾಚರಣೆ ಪ್ರಯುಕ್ತ ಜೂ.21ರಂದು ಕಡೂರಿನಲ್ಲಿ ಹಾಗೂ 23ರಂದು ಚಿಕ್ಕಮಗಳೂರಿನಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿಬಿರಕ್ಕೆ ವಿಶೇಷವಾಗಿ 2 ದಿನ ಬ್ಲಡ್ ಮೊಬೈಲ್ ಬಸ್ ಆಗಮಿಸುತ್ತಿದ್ದು, ಚಿಕ್ಕಮಗಳೂರು ಹಾಗೂ ಕಡೂರಿನ 2 ಸ್ಥಳಗಳಲ್ಲಿ ಬಸ್ನಲ್ಲಿ ರಕ್ತದಾನ ಶಿಭಿರಗಳನ್ನು ಹಮ್ಮಿಕೊಳ್ಳಲಾಗಿದೆ. ಹೆಚ್ಚು ಬಾರಿ ರಕ್ತದಾನ ಮಾಡಿದ ರಕ್ತದಾನಿಗಳಿಗೆ ಹಾಗೂ ಸಂಘ ಸಂಸ್ಥೆಗಳಿಗೆ ಸನ್ಮಾನಿಸಲಾಗುವುದು. ಕಾಲೇಜು ವಿದ್ಯಾರ್ಥಿಗಳಿಗೆ 'ಸುರಕ್ಷಿತ ರಕ್ತ, ತಾಯಂದಿರ ರಕ್ಷಣೆಗಾಗಿ' ಎಂಬ ವಿಷಯ ಕುರಿತು ಭಾಷಣ ಸ್ಪರ್ಧೆಯನ್ನು ಏರ್ಪಡಿಸಿ ಕಾರ್ಯಕ್ರಮದ ದಿನದಂದು ವಿಜೇತರಿಗೆ ಪ್ರಶಸ್ತಿ ನೀಡಲಾಗುವುದು ಎಂದು ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕದ ಜಿಲ್ಲಾ ಕಾರ್ಯಕ್ರಮಾಧಿಕಾರಿಗಳು ತಿಳಿಸಿದ್ದಾರೆ.