ಸರಸ್ವತಿ ಗ್ರಾಪಂಗೆ ಆಯ್ಕೆ
ಕಡೂರು: ಕಡೂರು ತಾಲೂಕು ಸರಸ್ವತಿಪುರ ಗ್ರಾಮ ಪಂಚಾಯಿತಿಯ ನೂತನ ಉಪಾಧ್ಯಕ್ಷರಾಗಿ ವಸಂತಮ್ಮ ತೀರ್ಥಾಚಾರ್ ಅವಿರೋಧವಾಗಿ ಆಯ್ಕೆಯಾದರು.
ಗೋವಿಂದಪುರ, ಚನ್ನಾಪುರ, ಕಂಸಾಗರ, ಸರಸ್ವತಿಪುರ, ಚನ್ನೇನಹಳ್ಳಿ, ತಾಂಡ್ಯ ಸೇರುವ ಈ ಪಂಚಾಯಿತಿಯಲ್ಲಿ 11 ಸದಸ್ಯರಿದ್ದು, ಉಪಾಧ್ಯಕ್ಷರಾಗಿದ್ದ ಮಹೇಶ್ವರಪ್ಪ ರಾಜಿನಾಮೆ ನೀಡಿದ್ದರಿಂದ ಉಪಾಧ್ಯಕ್ಷ ಸ್ಥಾನಕ್ಕೆ ಸದಸ್ಯೆ ವಸಂತಮ್ಮ ಓರ್ವರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ತಹಸೀಲ್ದಾರ್ ಚಿನ್ನರಾಜು ಅವರು ನೂತನ ಉಪಾಧ್ಯಕ್ಷರಾಗಿ ವಸಂತಮ್ಮ ತೀರ್ಥಾಚಾರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿ ಪ್ರಮಾಣ ಪತ್ರ ನೀಡಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಕಂಸಾಗರ ರೇವಣ್ಣ, ದೇವಿಕಾ, ಜಯಮ್ಮ ಪದ್ಮನಾಭ, ಸೀತಾಬಾಯಿ, ಸಂತೋಷ್, ಸೋಮ್ಲಿಬಾಯಿ, ಸುವರ್ಣಮ್ಮ ಪುಟ್ಟೇಗೌಡ, ಮುಖಂಡರಾದ ಎಸ್. ಎಲ್. ಪುಟ್ಟೇಗೌಡ, ರುದ್ರೇಗೌಡ, ಸತ್ಯನಾರಾಯಣ, ರಂಗನಾಥ, ಗೋಪಾಲಾಚಾರಿ, ಡಕಣಾಚಾರಿ, ಶಿವಮೂರ್ತಿ, ಮಲ್ಲಿಕಾರ್ಜುನ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಿ.ನವೀನ್‌ಕುಮಾರ್, ಗ್ರಾಮಸ್ಥರು ಇದ್ದರು.