ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

2 ದಿನದಿಂದ ಗೋಣಿಬೀಡು ಹೋಬಳಿ ಕತ್ತಲೆಯಲ್ಲಿ...

Lingaraj Badiger
Updated On : 17 Jun 2014, 10:41 am

ಮೂಡಿಗೆರೆ: ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ಎರಡು ದಿನಗಳಿಂದ ಗೋಣಿಬೀಡು ಹೋಬಳಿಯಲ್ಲಿ ವಿದ್ಯುತ್ ಇಲ್ಲದೆ ಜನತೆ ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ. ತಕ್ಷಣ ಸರಿಪಡಿಸದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಚಿನ್ನಿಗಾ ಗ್ರಾಪಂ ಉಪಾಧ್ಯಕ್ಷ ಸಿ.ವಿ.ಸುದೀಪ್ ಎಚ್ಚರಿಕೆ ನೀಡಿದ್ದಾರೆ.
     ಗೋಣಿಬೀಡು ಹೋಬಳಿ ಭಾಗದ ಜನ್ನಾಪುರ, ಬೆಟ್ಟದಮನೆ, ಕಿರುಗುಂದ, ದೇವರುಂದ ಹಂತೂರು, ಕಣಚೂರು, ಅಣಜೂರು ಭಾಗಗಳಲ್ಲಿ ಅನಿಯಮಿತ ವಿದ್ಯುತ್ ಕಡಿತ ಉಂಟಾಗಿದೆ. ಮಳೆ ಬಂತೆಂದರೆ ಸಾಕು ಈ ಭಾಗದಲ್ಲಿ ಪ್ರತಿ ಬಾರಿಯೂ ವಿದ್ಯುತ್ ಇಲ್ಲದೆಜನತೆ ಕತ್ತಲೆಯಲ್ಲಿ ದಿನಕಳೆಯುವಂತಾಗಿದೆ. ಇದಕ್ಕೆ  ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಮೂಲ ಕಾರಣವಾಗಿದೆ ಎಂದು ದೂರಿದ್ದಾರೆ.  ಈ ಭಾಗದಲ್ಲಿ 16 ವರ್ಷಗಳಿಂದ ಲೈನ್‌ಮ್ಯಾನ್‌ಗಳ ನೇಮಕ ಆಗಿಲ್ಲ. ಮಳೆಗಾಲ ಪೂರ್ವದಲ್ಲಿ ವಿದ್ಯುತ್‌ಲೈನ್ ಹಾದು ಹೋಗಿರುವ ಭಾಗಗಳಲ್ಲಿ ಜಂಗಲ್ ಕಟಿಂಗ್ ಸಹ ನಡೆದಿಲ್ಲ. ಈ ಬಗ್ಗೆ ಅಧಿಕಾರಿಗಳ ವಿರುದ್ಧ ಹಿರಿಯ ಅಧಿಕಾರಿಗಳು ಕಠಿಣ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ನಿರಂತರ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement