ತಾಪಂ ಪ್ರಭಾರಿ ಅಧ್ಯಕ್ಷರಾಗಿ ಜಗದೀಶ್ ಆಯ್ಕೆ
ತರೀಕೆರೆ: ತಾಪಂ ಪ್ರಭಾರಿ ಅಧ್ಯಕ್ಷರಾಗಿ ಕೆ.ಆರ್.ಜಗದೀಶ್ ಆಯ್ಕೆಯಾಗಿದ್ದಾರೆ. ಮಂಗಳವಾರ ತಾಪಂ ಅಧ್ಯಕ್ಷರ ಕಾರ್ಯಾಲಯದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ತಾಪಂ ಸದಸ್ಯ ವಿರೂಪಾಕ್ಷಪ್ಪ ಮಾತನಾಡಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಅಭಿವೃದ್ಧಿ ಕಾರ್ಯ ನಿರ್ವಹಿಸೋಣ ಎಂದು ತಿಳಿಸಿದರು.
ತಾಪಂ ಪ್ರಭಾರಿ ಅಧ್ಯಕ್ಷ ಕೆ.ಆರ್.ಜಗದೀಶ್ ಮಾತನಾಡಿ ಎಲ್ಲರ ಮಾರ್ಗದರ್ಶನ ಪಡೆದು ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸೋಣ ಎಂದು ತಿಳಿಸಿ, ತಾವು ಪ್ರಭಾರಿ ಅಧ್ಯಕ್ಷರಾಗಿ ಆಯ್ಕೆಯಾಗಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಅರ್ಪಿಸಿದರು. ತಾಪಂ ಸದಸ್ಯ ಎಲ್.ಎ.ಅನ್ಬು, ಕಾರ್ಯನಿರ್ವಹಣಾಧಿಕಾರಿ ದೇವರಾಜಪ್ಪ ಮಾತನಾಡಿದರು. ತಾಪಂ ಸದಸ್ಯರಾದ ಶಕುಂತಲ ನಾಗರಾಜ್, ದೀಪಾ ಉಮೇಶ್, ರತ್ನಮ್ಮ, ಮಲ್ಲಿಕಾರ್ಜುನ್ ಭಾಗವಹಿಸಿದ್ದರು.