ಕಂಪ್ಯೂಟರ್ ನೆರವಿನಿಂದ ಅನುವಾದ: ಕಮ್ಮಟ
ಶಿವಮೊಗ್ಗ: ಬೆಂಗಳೂರಿನ ಕುವೆಂಪು ಭಾಷಾ ಭಾರತಿ ನೆರವಿನಿಂದ ಜೂ.21ರಂದು ನಗರದ ಸಹ್ಯಾದ್ರಿ ಕಲಾ ಕಾಲೇಜಿನ ಭಾಷಾಶಾಸ್ತ್ರ ವಿಭಾಗವು -ಕಂಪ್ಯೂಟರ್ ನೆರವಿನಿಂದ ಅನುವಾದ ಹೇಗೆ ಮಾಡುವುದು ಎಂಬ ವಿಷಯ ಕುರಿತು ಒಂದು ದಿನದ ಕಮ್ಮಟ ಹಮ್ಮಿಕೊಂಡಿದೆ. ಕಮ್ಮಟದಲ್ಲಿ ಪಾಲ್ಗೊಳ್ಳಲು ಆಸಕ್ತಿ ಇರುವವರು ಜೂ.20ರೊಳಗೆ ಡಾ.ಮೇಟಿ ಮಲ್ಲಿಕಾರ್ಜುನ, ಮುಖ್ಯಸ್ಥರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಲಾ ಕಾಲೇಜು ಇವರಲ್ಲಿ ತಮ್ಮ ಹೆಸರು ನೋಂದಾಯಿಸಲು ಕೋರಲಾಗಿದೆ. ಕಮ್ಮಟದಲ್ಲಿ ಪಾಲ್ಗೊಳ್ಳುವವರಿಗೆ ಕಂಪ್ಯೂಟರಿನ ಪ್ರಾಥಮಿಕ ತಿಳಿವಳಿಕೆ ಇರಬೇಕಾಗಿರುವುದು ಕಡ್ಡಾಯ. ಕುವೆಂಪು ಭಾಷಾ ಭಾರತಿ ಅಧ್ಯಕ್ಷ ಪ್ರೊ. ಕೆ.ವಿ. ನಾರಾಯಣ, ಹಾಗೂ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಡಾ.ಜೆ ಬಾಲಕೃಷ್ಣ ಕಮ್ಮಟ ನಡೆಸಿಕೊಡುತ್ತಾರೆ. ಕಮ್ಮಟದಲ್ಲಿ ಪಾಲ್ಗೊಳ್ಳುವವರಿಗೆ ಪ್ರಮಾಣ ಪತ್ರವನ್ನು ಕೊಡಲಾಗುತ್ತದೆ.