ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಚಿನ್ನಿಗಾ-ಜನ್ನಾಪುರ: ಶಿಕ್ಷಕರ ನಿಯೋಜಿಸಲು ಒತ್ತಾಯ

Rashmi Kasaragodu
Updated On : 19 Jun 2014, 11:45 am

ಮೂಡಿಗೆರೆ: ಸುಮಾರು 200 ವಿದ್ಯಾರ್ಥಿಗಗಳಿರುವ  ಚಿನ್ನಿಗಾ-ಜನ್ನಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಖಾಲಿ ಇರುವ ಮುಖ್ಯ ಶಿಕ್ಷಕ ಸೇರಿ 4 ಹುದ್ದೆಗೆ ಶಿಕ್ಷಕರ ನಿಯೋಜಿಸುವಂತೆ  ಚಿನ್ನಿಗಾ ಗ್ರಾಪಂ ಹಾಗೂ ಶಾಲಾ ಮೇಲುಸ್ತುವಾರಿ ಸಮಿತಿ ಸಂಬಂಧಪಟ್ಟವರನ್ನು ಒತ್ತಾಯಿಸಿದೆ.   
  ಉನ್ನತೀಕರಿಸಿದ ಸರ್ಕಾರಿ ಪ್ರಾಥಮಿಕ ಶಾಲೆ ಇದಾಗಿದೆ. 10 ಶಿಕ್ಷಕರ ಹುದ್ದೆಗಳಿದ್ದು, ಮುಖ್ಯ ಶಿಕ್ಷಕರ ಹುದ್ದೆ  2 ವರ್ಷಗಳಿಂದ ಖಾಲಿ ಇದೆ.
  ಸದ್ಯ ಈ ಶಾಲೆಯಲ್ಲಿ ಕೇವಲ 6 ಶಿಕ್ಷಕರು ಕಾರ್ಯ ನಿರ್ವಹಿಸುವ ಪರಿಸ್ಥಿತಿಗೆ ಕ್ಷೇತ್ರ ಶಿಕ್ಷಣಾಧಿಕಾರಿಯೇ ಕಾರಣರಾಗಿದ್ದಾರೆ. ಅವರು ಶಿಕ್ಷಕರ ಹುದ್ದೆಗಳನ್ನು ಸ್ಥಳಾಂತರಿಸುತ್ತಿದ್ದಾರೆ ಎಂದು ಮನವಿಯಲ್ಲಿ ದೂರಲಾಗಿದೆ. ಈ ಶಾಲೆಯಲ್ಲಿ 8ನೇ ತರಗತಿ ಜತೆಗೆ ಆಂಗ್ಲ ಮಾಧ್ಯಮ ಶಿಕ್ಷಣ ವ್ಯವಸ್ಥೆಯೂ ಇದೆ. ವಾರದಲ್ಲಿ ಒಬ್ಬೊಬ್ಬ ಶಿಕ್ಷಕರು ತರಬೇತಿಗೆ ನಾಲ್ಕೈದು ದಿನಗಳವರೆಗೆ ಕಳಿಸುವ ಅನಿವಾರ್ಯ ಸ್ಥಿತಿಯಲ್ಲಿ ಶಾಲೆ ಇದೆ.  ಕ್ಷೇತ್ರ ಶಿಕ್ಷಣಾಧಿಕಾರಿಗಳು ಸುಮಾರು 200 ವಿದ್ಯಾರ್ಥಿಗಳು ಕಲಿಯುತ್ತಿರುವ ಶಾಲೆಯ 2 ಶಿಕ್ಷಕರ ಹುದ್ದೆ ದುರುದ್ದೇಶದಿಂದ ಸ್ಥಳಾಂತರಿಸಿರುವ ಅನುಮಾನಗಳಿವೆ. ಅಗತ್ಯವಿರುವ ನಾಲ್ಕು ಶಿಕ್ಷಕರ ಹುದ್ದೆಗಳನ್ನು ಭರ್ತಿಗೊಳಿಸಿ ಕೊಡಬೇಕು. ಇಲ್ಲದಿದ್ದರೆ ಕ್ಷೇತ್ರ ಶಿಕ್ಷಣಾಧಿಕಾರಿ ವರ್ಗಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಚಿನ್ನಿಗಾ ಗ್ರಾಪಂ ಅಧ್ಯಕ್ಷೆ ರಮಿಜಾಬಿ, ಉಪಾಧ್ಯಕ್ಷ ಸಿ.ವಿ.ಸುದೀಪ್, ಎಸ್‌ಡಿಎಂಸಿ ಅಧ್ಯಕ್ಷ ಕಿರುಗುಂದ ಅಬ್ಬಾಸ್, ಉಪಾಧ್ಯಕ್ಷೆ ಅನಿತಾ ಸಿ.ವಿ.ಮಹೇಶ್ ಸುಮ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement