ಖಾಸಗಿ ಬಸ್ ಡಿಕ್ಕಿ: ಸ್ಥಳದಲ್ಲೇ ಜಿಂಕೆ ಸಾವು
ಕೊಪ್ಪ: ಸಮೀಪದ ವಿಟ್ಲಮಕ್ಕಿ ಬಳಿ ಆಕಸ್ಮಿಕವಾಗಿ ಖಾಸಗಿ ಬಸ್ಸೊಂದು ಡಿಕ್ಕಿ ಪರಿಣಾಮ ಜಿಂಕೆಯೊಂದು ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ನಡೆದಿದೆ. ಕೊಪ್ಪದಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಬಸ್ಗೆ ಏಕಾಏಕಿ ಜಿಂಕೆ ಅಡ್ಡ ಬಂದಿದ್ದರ ಪರಿಣಾಮ ಬಸ್ಸಿಗೆ ಜಿಂಕೆ ಅಡ್ಡ ಬಿದ್ದಿದ್ದು ಕಂಡು ಚಾಲಕ ಬಸ್ ನಿಲ್ಲಿಸಿ ಪ್ರಥಮ ಚಿಕಿತ್ಸೆಗೆ ಮುಂದಾದರು. ಆದರೆ ಜಿಂಕೆ ಬೆನ್ನು ಹಾಗೂ ಹೊಟ್ಟೆಗೆ ತೀವ್ರ ಪೆಟ್ಟು ಬಿದ್ದ ಪರಿಣಾಮ ಸ್ಥಳದಲ್ಲೇ ಮೃತ ಪಟ್ಟಿದೆ. ವಿಷಯ ತಿಳಿದು ಅರಣ್ಯ ಇಲಾಖೆ ಅಧಿಕಾರಿ ಕಾಂಬ್ಲೆಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪಶುವೈದ್ಯ ಡಾ. ಸುಧೀರ್ ಮರಣೋತ್ತರ ಪರೀಕ್ಷೆ ಮಾಡಿದರು. ನಂತರ ಜಿಂಕೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.