ಗಿಡ ನೆಟ್ಟು ರಾಹುಲ್ ಜನ್ಮದಿನ ಆಚರಣೆ
ಕೊಪ್ಪ: ಕಾಂಗ್ರೆಸ್ ಪಕ್ಷದ ಯುವ ಮುಖಂಡ ರಾಹುಲ್ ಗಾಂಧಿ ಅವರ 44ನೇ ಹುಟ್ಟು ಹಬ್ಬದ ಪ್ರಯುಕ್ತ ಶೃಂಗೇರಿ ವಿಧಾನಸಭಾ ಕ್ಷೇತ್ರದ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಪಟ್ಟಣದ ಗುಣವಂತೆಯ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ವನಮಹೋತ್ಸವ ಆಚರಿಸಿದರು.
ಈ ಸಂದರ್ಭ ಶೃಂಗೇರಿ ಕ್ಷೇತ್ರದ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಹ್ಮದ್ ಹರ್ಷದ್ ಮಾತನಾಡಿ, ಹಸಿರು ದೇಶದ ಸಮೃದ್ಧತೆಯ ಸಂಕೇತ. ಈ ನಿಟ್ಟಿನಲ್ಲಿ ರಾಹುಲ್ ಗಾಂಧಿ ಅವರು ಹುಟ್ಟುಹಬ್ಬ ಆಚರಣೆಯ ಪ್ರಯುಕ್ತ ಕ್ಷೇತ್ರ ವಿವಿಧ ಭಾಗದ ಶಾಲೆಯ ಆವರಣಗಳಲ್ಲಿ ಗಿಡಗಳನ್ನು ನೆಟ್ಟು ವನಮೋಹೋತ್ಸವ ಮಾಡುವ ಮೂಲಕ ಮಕ್ಕಳಲ್ಲಿ ಹೆಚ್ಚು ಗಿಡಗಳನ್ನು ನೆಟ್ಟು ಪೋಷಿಸಲು ಪ್ರೇರೇಪಿಸುವಲ್ಲಿ ಕಾರ್ಯಕರ್ತರು ತೊಡಗಿದ್ದಾರೆ ಎಂದರು.
ಯೂತ್ ಕಾಂಗ್ರೆಸ್ನ ರಾಜ್ಯ ಕಾರ್ಯದರ್ಶಿ ನವೀನ್ ಮಾವಿನಕಟ್ಟೆ, ಕ್ಷೇತ್ರ ಉಪಾಧ್ಯಕ್ಷ ರೇವಂತ್, ತಾಲೂಕು ಅಧ್ಯಕ್ಷ ಸಮರ್ಥ, ಪಪಂ ಅಧ್ಯಕ್ಷೆ ಮಾಲತಿ, ಹರಂದೂರು ಗ್ರಾಪಂ ಅಧ್ಯಕ್ಷೆ ಇಂದಿರಾ, ಸದಸ್ಯರಾದ ಲಿಸ್ಸಿ ಡಿಸೋಜಾ, ಅಶೋಕ್, ಸುಬ್ಬೂಜಿ, ಕಾಂಗ್ರೆಸ್, ಮುಖಂಡರಾದ ಹರೀಶ್ ಭಂಡಾರಿ, ಸುಬ್ರಮಣ್ಯ ಶೆಟ್ಟಿ ಮುಂತಾದವರು ಇದ್ದರು.