ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಗೋದಾಮು ಉದ್ಘಾಟನೆ 22ರಂದು

Rashmi Kasaragodu
Updated On : 20 Jun 2014, 11:56 am

ಬಾಳೆಹೊನ್ನೂರು: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ರಂಭಾಪುರಿಮಠ ರಸ್ತೆಯ ರೇಣುಕ ನಗರದಲ್ಲಿ ಸಹಕಾರ ಸಂಘದ ನಿಧಿ, ಷೇರುದಾರರ ಆರ್ಥಿಕ ಸಹಾಯಧನ ಹಾಗೂ ಶಾಸಕರ ಅನುದಾನದಲ್ಲಿ ನಿರ್ಮಿಸಿರುವ ನೂತನ ಗೋದಾಮು ಕಟ್ಟಡದ ಉದ್ಘಾಟನಾ ಸಮಾರಂಭ ಜೂ. 22 ರಂದು ನಡೆಯಲಿದೆ.
ಶಾಸಕ ಡಿ.ಎನ್. ಜೀವರಾಜ್ ಕಟ್ಟಡ ಉದ್ಘಾಟಿಸಲಿದ್ದು, ಸಂಘದ ಅಧ್ಯಕ್ಷ ಕೆ.ಕೆ. ಸುಧಾಕರ ಅಧ್ಯಕ್ಷತೆ ವಹಿಸಲಿದ್ದಾರೆ. ಉಡುಪಿ- ಚಿಕ್ಕಮಗಳೂರು ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಇ-ಸ್ಟಾಂಪಿಂಗ್ ಸೌಲಭ್ಯ ಉದ್ಘಾಟಿಸಲಿದ್ದಾರೆ.
ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಕೆ.ಟಿ. ವೆಂಕಟೇಶ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್. ರಾಜಶೇಖರ್, ನಿರ್ದೇಶಕ ಕೆ.ಸಿ. ವೆಂಕಟೇಶ, ಜಿಪಂ ಸದಸ್ಯ ಮಹಮ್ಮದ್ ಇಫ್ತೆಖಾರ್ ಆದಿಲ್, ತಾಪಂ ಸದಸ್ಯೆ ಹೇಮಲತಾ ಪ್ರಭಾಕರ್, ಬಿ.ಬಿ. ಉಮಾ, ಗ್ರಾಪಂ ಅಧ್ಯಕ್ಷೆ ಶಾಹಿದಾಬಾನು, ಸಹಕಾರ ಸಂಘದ ಉಪ ನಿಬಂಧಕ ಬಿ.ಕೆ. ಸಲೀಂ, ಸಹಾಯಕ ನಿಬಂಧಕ ಮುಕುಂದಯ್ಯ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಎಂ.ಪಿ. ನಾಗಶಯನ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್. ಉಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement