ತರೀಕೆರೆಯಲ್ಲಿ ಗಿಡ ನೆಡುವ ಕಾರ್ಯಕ್ರಮ
ತರೀಕೆರೆ: ಪ್ರಕೃತಿ ಯುವಕ ಸಂಘ, ಸ್ನೇಹ ಸ್ಫೂರ್ತಿ ಯುವಕ ಸಂಘ ವತಿಯಿಂದ ಗುರುವಾರ ಪಟ್ಟಣದಲ್ಲಿ ಪರಿಸರ ಸಂರಕ್ಷಣೆಗಾಗಿ ಗಿಡ ನೆಡುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಸಂಘದ ಅಧ್ಯಕ್ಷ ನಟರಾಜ್ ಅಧ್ಯಕ್ಷತೆ ವಹಿಸಿದ್ದರು.
ಪುರಸಭೆ ಅಧ್ಯಕ್ಷ ಸುನೀಲ್ ದತ್ತ, ಸದಸ್ಯರಾದ ಟಿ.ಜಿ. ಅಶೋಕ್ಕುಮಾರ್, ನಾಗರಾಜ್, ಸುರೇಶ್ ಟಿ.ಜಿ. ಸದಾನಂದ್ ಮತ್ತಿತರರು ಗಿಡಗಳನ್ನು ನೆಟ್ಟು ಪಟ್ಟಣದ ಎಲ್ಲಾ ನಿವಾಸಿಗಳು ಪರಿಸರ ಉಳುವಿಗಾಗಿ ಗಿಡಗಳನ್ನು ಪೋಷಣೆ ಮಾಡಬೇಕು ಎಂದು ತಿಳಿಸಿದರು.
ಪ್ರಕೃತಿ ಯುವಕ ಸಂಘದ ಸದಸ್ಯರಾದ ಶಿವರಾಜ್, ಮಂಜು, ಶ್ರೀಧರ್, ಚಂದ್ರು, ವಿನೋದ್ ಮಧುಸೂದನ್ ಕರುಣಾ, ದೇವಾನಂದ್ ಉಮೇಶ್ ಧರ್ಮರಾಜ್, ಶಿವಕುಮಾರ್, ಜಗದೀಶ್ ಮತ್ತಿತರರು ಭಾಗವಹಿಸಿದ್ದರು.