ಜಾನುವಾರು ಅಕ್ರಮ ಸಾಗಣೆ: 3 ಬಂಧನ
ಕೊಪ್ಪ: ಅಕ್ರಮವಾಗಿ ಕಸಾಯಿ ಖಾನೆಗೆ ಸಾಗಿಸುತ್ತಿದ್ದ 8 ರಾಸುಗಳನ್ನು ರಕ್ಷಿಸಿ, ಮೂವರು ಆರೋಪಿಗಳನ್ನು ಬಂಧಿಸಿ ಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಇಲ್ಲಿನ ಅಡ್ಡಗದ್ದೆಯಿಂದ ಭದ್ರಾವತಿಯ ಕಸಾಯಿಖಾನೆಗೆ ರಾಸುಗಳನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಗುರುವಾರ ಪಟ್ಟಣದ ದ್ಯಾವೇಗೌಡ ವೃತ್ತದಲ್ಲಿ ಮಹೇಂದ್ರ ಪಿಕಪ್ ವಾಹನ ತಡೆದು ಪರಿಶೀಲಿಸಿದರು.
ಈ ಸಂದರ್ಭ ಚಾಲಕ ರಮೇಶ್, ದಸ್ತಗಿರಿ ಹಾಗೂ ರಾಸುಗಳನ್ನು ಮಾರಾಟ ಮಾಡಿದ ಮಹೇಶ್ ಎಂಬವರನ್ನು ಬಂಧಿಸಲಾಯಿತು. ಪೊಲೀಸ್ ಠಾಣೆ ಆವರಣದಲ್ಲಿ ಕಟ್ಟಲಾಗಿದ್ದ ರಾಸುಗಳನ್ನು ಶುಕ್ರವಾರ ಬಜರಂಗದಳ ಕಾರ್ಯಕರ್ತರು ಶಿವಮೊಗ್ಗ ಗೋಶಾಲೆಗೆ ಸಾಗಿಸಿದರು.