ರಸ್ತೆಯಲ್ಲೇ ಕುಸಿದ ವ್ಯಕ್ತಿಗೆ ಚಿಕಿತ್ಸೆ
ಮೂಡಿಗೆರೆ: ಮಧುಮೇಹದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಕುಸಿದುಬಿದ್ದ ಪರಿಣಾಮ ಕರವೇ ಕಾರ್ಯಕರ್ತರು ಮತ್ತು ಸಾರ್ವಜನಿಕರು ಅವರನ್ನು ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ.
ತಾಲೂಕಿನ ಸಬ್ಜೇನಹಳ್ಳಿಯ ಜಾನ್ ಪರ್ಬು ಕುಸಿದು ಬಿದ್ದವರು. ಮೂಡಿಗೆರೆಗೆಂದು ಕಾಲ್ನಡಿಗೆಯಲ್ಲಿ ಸಾಗುತ್ತಿದ್ದಾಗ ರಸ್ತೆಯಲ್ಲೇ ಕುಸಿದುಬಿದ್ದರು. ಈ ಬಗ್ಗೆ ಸ್ಥಳೀಯರು ಕರವೇ ಗೌರವಾಧ್ಯಕ್ಷ ಹೊರಟ್ಟಿ ರಘು ಎಂಬವರಿಗೆ ಮಾಹಿತಿ ನೀಡಿದರು.
ಈ ಸಂದರ್ಭ ಆರೋಗ್ಯ ಕವಚ-108 ಆ್ಯಂಬ್ಯುಲೆನ್ಸ್ ವಾಹನಕ್ಕೆ ಕರೆ ಮಾಡಲಾಯಿತು. ವಾಹನ ಬಾರದ ಹಿನ್ನೆಲೆ ಸಿ.ಕೆ.ಉಮ್ಮರ್, ಮೋಹನ, ಇರ್ಷಾದ್ ಮತ್ತು ರವಿ ಅವರು ಹೊರಟ್ಟಿ ರಘು ಸಹಕಾರದಿಂದ ಖಾಸಗಿ ವಾಹನದಲ್ಲಿ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ತಂದು ಚಿಕಿತ್ಸೆ ಕೊಡಿಸಿದರು.