ಸೌಹಾರ್ದದಿಂದ ದೇಶ ಸುಭಿಕ್ಷ
ಚಿಕ್ಕಮಗಳೂರು: ಮನುಷ್ಯ ಸೇರಿದಂತೆ ಭೂಮಿಯಲ್ಲಿರುವ ಸಕಲ ಜೀವರಾಶಿಗಳಿಗೆ ಕರುಣೆ ಮೂಲಕ ಸೌಹಾರ್ದ ತೋರು ಎನ್ನುವ ಧರ್ಮ ಇಸ್ಲಾಂ ಎಂದು ಎಸ್‌ವೈಎಸ್ ರಾಜ್ಯಾಧ್ಯಕ್ಷ ಕೆ.ಸಿ. ರೋಡ್ ಹುಸೇನ್ ಸಅದಿ ಹೇಳಿದ್ದಾರೆ.
ಇಲ್ಲಿನ ಶಾಂತಿನಗರದ ಕಲ್ಲುದೊಡ್ಡಿಯ ಎಚ್‌ಕೆಜೆಎಂ ಮಸೀದಿ ಆವರಣದಲ್ಲಿ ಎಸ್‌ವೈಎಸ್ ಹಮ್ಮಿಕೊಂಡಿದ್ದ ಬ್ರಹತ್ ದ್ಸಿಕ್ರ್ ಮಜ್ಲಿಸ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇದು ಮಹತ್ವದ ತಿಂಗಳು. ಮುಂಬರುವ ರಂಜಾನ್ ತಿಂಗಳು ಪುಣ್ಯಗಳ ಕೊಯ್ಲು ಕಾಲ. ಯಾವುದೇ ಕರುಣೆ ಕೇವಲ ರಮಜಾನ್‌ಗೆ ಸೀಮಿತವಾಗದೆ ವರ್ಷಪೂರ್ತಿ ಹೃದಯ ಶ್ರೀಮಂತಿಕೆ ತೋರಬೇಕೆಂದರು.
ಎಸ್‌ವೈಎಸ್ ಜಿಲ್ಲಾಧ್ಯಕ್ಷ ಎಪಿಎಸ್ ಹುಸೈನ್ ಅಲ್ ತಂಙಳ್ ಮಾತನಾಡಿ, ಎಸ್‌ವೈಎಸ್ ಸಂಘಟನೆ ಕಳೆದ ಹಲವು ವರ್ಷಗಳಿಂದ ಸಮಾಜಮುಖಿ ಕಾರ್ಯದಲ್ಲಿ ತೊಡಗಿ ಯುವಕರಿಗೆ ಸೌಹಾರ್ದತೆ ಕುರಿತು ಹಲವು ಶಿಬಿರ ಮಾಡಿದೆ. ಮಜ್ಲಿಸ್ ಅಂಗವಾಗಿ ಜಾತಿ ಭೇದ ತೊರೆದು ಬಡಮಕ್ಕಳಿಗೆ ಉಚಿತ ನೋಟ್‌ಬುಕ್ ವಿತರಿಸಲಾಗುತ್ತಿದೆ, ಇದರೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಪ್ರತಿಭೆಗಳಿಗೆ ಪ್ರೋತ್ಸಾಹಿಸಲಾಗುತ್ತಿದೆ ಎಂದು ಹೇಳಿದರು.
ಮದರಸ ಗುರುಗಳಾದ ಶರೀಫ್ ಕಿಲ್ಲೂರ್, ಹಾರಿಸ್ ಸಖಾಫಿ, ತಾಜುಸ್ಸುನ್ನು ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಲೀಂ ತಂಙಳ್, ಮುಖಂಡರಾದ ತ್ವಾಹಾ ಸದಿ, ಅಬ್ದುಲ್ಲ ಹಾಜಿ, ಝೈದ್ ಬಾಹಸನಿ, ಅಬ್ಬಾಸ್, ಇಬ್ರಾಹಿಂ, ಹನೀಫ್, ಕೆ.ಪಿ. ಅಬೂಬಕರ್, ಹುಸೈನ್, ಮುನೀರ್ ಅಹಮದ್, ಇದ್ದಿನಬ್ಬ, ಮಹಮದ್ ರಝ್ವಿ, ಯೂಸೂಫಾಜಿ ಇದ್ದರು.