ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮಗು ಶಸ್ತ್ರಚಿಕಿತ್ಸೆ; ನೆರವಿಗೆ ಮನವಿ

Rashmi Kasaragodu
Updated On : 22 Jun 2014, 11:49 am

ಚಿಕ್ಕಮಗಳೂರು: ಬೇಲೂರು ತಾಲೂಕಿನ ಸನ್ಯಾಸಿಹಳ್ಳಿಯ ನಾಲ್ಕುವರೆ ವರ್ಷದ ಮಗು (ಮುರಳಿ) ಬಿಟಾ ತಲಸೀಮಿಯಾ ರೋಗದಿಂದ ಬಳಲುತ್ತಿದೆ. ಈ ಮಗುವಿನ ದೇಹದಲ್ಲಿ ರಕ್ತ ಕಡಿಮೆಯಾಗುತ್ತಿದ್ದು, ಪ್ರತಿ ತಿಂಗಳು ರಕ್ತ ನೀಡಲಾಗುತ್ತಿದೆ. ಇದರ ಜತೆಗೆ ಪ್ರತಿದಿನ ಮಾತ್ರೆ ನೀಡಲಾಗುತ್ತಿದೆ. ಈ ಮಾತ್ರೆ ದರ ರು. 1300.  ಮಗುವಿಗೆ ಶಸ್ತ್ರ ಚಿಕಿತ್ಸೆ ಮಾಡಿಸಲು 23 ಲಕ್ಷ ಬೇಕಾಗಿದೆ. ಈ ಹಣ ಹೊಂದಿಸಲು ಪೋಷಕರು ಹಲವರನ್ನು ಸಂಪರ್ಕಿಸುತ್ತಿದ್ದಾರೆ. ಮಗುವಿನ ತಂದೆ ಶ್ರೀನಿವಾಸ್ ಆಟೋ ಓಡಿಸುತ್ತಿದ್ದಾರೆ. ಇಂತಹ ಕಷ್ಟದ ಜೀವನ ನಡೆಸುತ್ತಿರುವ ಈ ಪೋಷಕರಿಗೆ ಮಗುವನ್ನು ಉಳಿಸಿಕೊಳ್ಳಲು ಬೇಕಾದ ರು. 23 ಲಕ್ಷ ಹೊಂದಿಸಿಕೊಳ್ಳುವುದು ಕಷ್ಟವಾಗಿದೆ. ಮಗುವಿನ ರೋಗ ನಿವಾರಣೆಗೆ ಪತ್ನಿ ಶ್ವೇತ ಇನ್ನೊಂದು ಮಗುವಿಗೆ ಜನ್ಮ ನೀಡಿದರೆ ಆ ಮಗುವಿನ ಒಕ್ಕುಳು ಬಳ್ಳಿಯ ಕೆಲವು ಅಂಶಗಳನ್ನು ತೆಗೆದು ಮುರಳಿಗೆ ನೀಡುವುದರಿಂದ ರೋಗ ಗುಣಮುಖವಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆಂದು ಶ್ರೀನಿವಾಸ್ ತಿಳಿಸಿದರು. ದಾನಿಗಳು ಶ್ವೇತಾರವರ ಎಸ್.ಬಿ.ಐ. ಬ್ಯಾಂಕ್ ಬೇಲೂರು ಶಾಖೆಯ ಖಾತೆ ಸಂಖ್ಯೆ 33794029599 (ಐ.ಎಫ್.ಎಸ್.ಸಿ. ಕೋಡ್ ಎಸ್.ಬಿ.ಐ. 0013440)ಗೆ ಹಣ ಸಂದಾಯ ಮಾಡಬೇಕೆಂದು ಮನವಿ (ಮೊ.7353608969) ಮಾಡಿದ್ದಾರೆ.


ಕಚೇರಿ ಸ್ಥಳಾಂತರ; ಪ್ರತಿಭಟನೆ


ತರೀಕೆರೆ: ನಾಗರೀಕ ಹೋರಾಟ ಸಮಿತಿ ತರೀಕೆರೆ ತಾಲೂಕು ವತಿಯಿಂದ ಶನಿ ವಾರ, ಸಬ್ ರಿಜಿಸ್ಟ್ರಾರ್  ಕಚೇರಿ ಮಿನಿ ವಿಧಾನ ಸೌಧದಿಂದ ಖಾಸಗಿ ಕಟ್ಟಡಕ್ಕೆ ಸ್ಥಳಾಂತರ ವಿರೋಧಿಸಿ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಲಾಯಿತು. ಮಾಜಿ ಶಾಸಕ ಬಿ.ಆರ್.ನೀಲಕಂಠಪ್ಪ, ಆರ್. ದೇವಾನಂದ್, ಮಾಜಿ ಪುರಸಭಾಧ್ಯಕ್ಷ ಎನ್.ಮಂಜುನಾಥ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಟಿ.ಎಚ್.ಎಲ್.ರಮೇಶ್, ಟಿ.ಎಸ್.ಯಶೋಧರಮೂರ್ತಿ, ಟಿ.ಎಸ್.ಶಾಂತರಾಜ್, ಟಿ.ಜಿ.ಮಂಜುನಾಥ್, ಮೋಹನ್, ದುಗ್ಲಾಪುರ ಮಂಜುನಾಥ್, ಟಿ.ಜಿ.ಸದಾನಂದ್, ಶಿವಮೂರ್ತಿ, ಕುಮಾರ್ ನೀಲಮ್ಮ ಹೋರಾಟ ಸಮಿತಿ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಟಿ.ಜಿ.ಸದಾನಂದ್ ಮನವಿ ಪತ್ರ ಓದಿದರು.  ಉಪವಿಭಾಗಾಧಿಕಾರಿಗಳಿಗೆ ಮನವಿ ಪತ್ರ ಅರ್ಪಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement