ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಗಾಯತ್ರಿ ಶಾಂತೇಗೌಡಗೆ ಸಚಿವ ಸ್ಥಾನ:ಸಿಎಂಗೆ ಮನವಿ

Rashmi Kasaragodu
Updated On : 23 Jun 2014, 10:54 am

ಚಿಕ್ಕಮಗಳೂರು: ವಿಧಾನ ಪರಿಷತ್ ಸದಸ್ಯೆ ಎ.ವಿ. ಗಾಯತ್ರಿ ಶಾಂತೇಗೌಡ ಅವರಿಗೆ ಸಚಿವ ಸ್ಥಾನ ನೀಡುವಂತ ಒತ್ತಾಯಿಸಿ ಚಿಕ್ಕಮಗಳೂರು ನಗರಸಭೆ ಕಾಂಗ್ರೆಸ್ ಸದಸ್ಯರು ಮತ್ತು ಜಿಲ್ಲಾ ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವನಮಾಲ ಮೃತ್ಯುಂಜಯ, ಕಾರ್ಯದರ್ಶಿ ವಸಂತ ರಾಮಚಂದ್ರ, ನಗರಸಭೆ ಸದಸ್ಯ ಹಿರೇಮಗಳೂರು ಪುಟ್ಟಸ್ವಾಮಿ ನೇತೃತ್ವದ ಮುಖಂಡರ ನಿಯೋಗ ಇತ್ತೀಚೆಗೆ ಬೆಂಗಳೂರಿನಲ್ಲಿ ಈ ಇಬ್ಬರು ನಾಯಕರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
ನಕ್ಸಲ್ ಸಮಸ್ಯೆ, ಕಳಸಾ ಇನಾಂ ಭೂಮಿ ಸಮಸ್ಯೆ, ಒತ್ತುವರಿ ಸಮಸ್ಯೆ, ಮಲೆನಾಡಿನಲ್ಲಿ ಅಡಕೆಗೆ ತಗುಲಿರುವ ಹಳದಿ ಎಲೆ ರೋಗ ಸಮಸ್ಯೆ, ಕುದುರೆಮುಖ ಕೇದ್ರೀಯ ವಿದ್ಯಾಲಯ ಸಮಸ್ಯೆ ಸೇರಿದಂತೆ ಇಂತಹ ಅನೇಕ ಸಮಸ್ಯೆಗಳು ಜಿಲ್ಲೆಯ ಅಭಿವೃದ್ಧಿಗೆ ಅಡ್ಡಿಯಾಗಿವೆ ಎಂದರು. ನಿಯೋಗದಲ್ಲಿ ಕೊಪ್ಪ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೀತಾಲಕ್ಷ್ಮಿ, ಶೃಂಗೇರಿ ಬ್ಲಾಕ್ ಅಧ್ಯಕ್ಷೆ ಪೂರ್ಣಿಮಾ ಸಿದ್ದಪ್ಪ, ಮೂಡಿಗೆರೆ ಬ್ಲಾಕ್ ಸುಶೀಲಾ ಶೇಖರ್, ೂಬೆನ್ ಮೋಸೆಸ್, ಸುರೇಖಾ ಸಂಪತ್ ರಾಜ್, ಯಶೋಧಾ ಗಂಗಾಧರ್, ತೇಜ, ಮುಖಂಡ ಜಬಿ, ಮಧುಕರ್, ಆನಂದ್, ಯತಿರಾಜ್ ನಾಯ್ಡ್, ಜಿಪಂ ಮಾಜಿ ಸದಸ್ಯ. ಅಣ್ಣೇಗೌಡ ಇದ್ದರು.


ಅರ್ಜಿ ಆಹ್ವಾನ
 ಚಿಕ್ಕಮಗಳೂರು: ಜಿಲ್ಲಾ ಕೈಗಾರಿಕಾ ಕೇಂದ್ರ ವತಿಯಿಂದ ವಿಶೇಷ ಘಟಕ ಯೋಜನೆಯಡಿ ಮತ್ತು ಗಿರಿಜನ ಉಪಯೋಜನೆಯಡಿ ಸ್ವಯಂ ಉದ್ಯೋಗ ಹೊಂದಲು ವಿವಿಧ ವೃತ್ತಿಗಳ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಜೂ. 30 ರಂದು ಬೆಳಿಗ್ಗೆ 11 ಗಂಟೆಗೆ ಕೈಗಾರಿಕಾ ಕೇಂದ್ರ, ಕೆ.ಎಂ. ರಸ್ತೆ, ಜಿಲ್ಲಾ ಪಂಚಾಯಿತಿ, ಚಿಕ್ಕಮಗಳೂರು ಇಲ್ಲಿ ಸಂದರ್ಶನಕ್ಕೆ ಹಾಜರಾಗಬಹುದಾಗಿದ್ದು, ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗೆ ಜಂಟಿ ನಿರ್ದೇಶಕರ ಕಚೇರಿ, ಜಿಲ್ಲಾ ಕೈಗಾರಿಕಾ ಕೇಂದ್ರ ಚಿಕ್ಕಮಗಳೂರು ಅಥವಾ ಕೈಗಾರಿಕಾ ಉತ್ತೇಜನಾಧಿಕಾರಿ, ಕುಶಲಕರ್ಮಿ ತರಬೇತಿ ಸಂಸ್ಥೆ, ಮಲ್ಲಂದೂರು ವೃತ್ತ, ಚಿಕ್ಕಮಗಳೂರು ಅಥವಾ ಆಯಾ ತಾಲೂಕು ಕೈಗಾರಿಕಾ ವಿಸ್ತರಣಾಧಿಕಾರಿಗಳನ್ನು ಸಂಪರ್ಕಿಸಬಹುದು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement