ವಿಳ್ಳೇದೆಲೆಗೆ ರೋಗ; ವಿಜ್ಞಾನಿಗಳ ಪರಿಶೀಲನೆ
ತರೀಕೆರೆ: ತಾಲೂಕಿನ ಕಸಬಾ ಹೋಬಳಿಯ ವಿವಿಧ ಗ್ರಾಮಗಳಲ್ಲಿ ವಿಳ್ಳೇದೆಲೆಗೆ ಸೊರಗು ರೋಗ ತಗುಲಿರುವ ಹಿನ್ನೆಲೆಯಲ್ಲಿ, ಕೇಂದ್ರೀಯ ತೋಟ ಬೆಳೆಗಳ ಸಂಶೋಧನಾ ಮಂಡಳಿ ವಿಜ್ಞಾನಿಗಳ ತಂಡ ಭೇಟಿ ಮಾಡಿ ಪರಿಶೀಲನೆ ನಡೆಸಿತು.
ಸೊರಗು ರೋಗ ಹತೋಟಿ ಮತ್ತು ಮುನ್ನೆಚ್ಚರಿಕೆ ಕ್ರಮಗಳಾಗಿ, ಜೈವಿಕ ಹತೋಟಿ ಟ್ರೈಕೂಡರ್ಮ, ಹಾರ್ಜಿಯನಂ, ಏರಿಡೆಯನ್ನು ಬೇವಿನ ಹಿಂಡಿಯೊಂದಿಗೆ ಪ್ರತಿ ಗಿಡಕ್ಕೆ 2 ಕೆಜಿಯಂತೆ ಮೂರು ಬಾರಿ ನೀಡಬೇಕು. ಹಾಗೂ 2 ವರ್ಷಗಳ ವರೆಗೆ ಈ ಕ್ರಮ ಅನುಸರಿಸಬೇಕು. ಶೇ.5ರ ಬೋಡೋ ದ್ರಾವಣ ತಯಾರಿಸಿ ಮಳೆ ಬರುವ ಮೊದಲು ಸಿಂಪರಣೆ ಮಾಡಬೇಕು. ಚೆಂಡು ಹೂ ಏಪ್ರಿಲ್ ನಿಂದ ಆಗಸ್ಟ್ ಮಾಹೆಯೊಳಗೆ ಬೆಳೆಯಬೇಕು. ಈಗಾಗಲೇ ಬಾಧೆಗೊಳಗಾಗಿರುವ ಎಲೆ ಬಳ್ಳಿಗಳನ್ನು ಸುಡಬೇಕು. ತೋಟದಲ್ಲಿ ಬಸಿ ಗಾಲುವೆ ಮಾಡಬೇಕು. ವಿಳ್ಳೇದೆಲೆ ಕುಟುಂಬಕ್ಕೆ ಸೇರಿದ ಬೇರೆ ಬೆಳೆಗಳನ್ನು ಬೆಳೆಯಬಾರದು, .ಹಾಗೂ ತರಕಾರಿ ಬೆಳೆಗಳನ್ನು ಅಂತರ ಬೆಳೆಯಾಗಿ ಬೆಳೆಯುವುದು ಸೂಕ್ತ. ಹೊಸದಾಗಿ ವಿಳ್ಳೇದೆಲೆ ನಾಟಿ ಮಾಡುವ ರೈತರು ಕಾರ್ಬೋಫ್ಯೂರನ್ ಪ್ರತಿ ಗಿಡಕ್ಕೆ ಪ್ರತಿ ನಿತ್ಯ 5 ರಿಂದ 10 ಗ್ರಾಂ ನೀಡಬೇಕು ಎಂದು ರೈತರಿಗೆ ಮಾಹಿತಿ ನೀಡಿದರು.
ಕಾಸರಗೂಡು ಸಿಪಿಸಿಆರ್ಐನ ಡಾ.ರಾಜ್ಕುಮಾರ್, ಬಾವಿಕೆರೆ ಕೃಷಿ ಮತ್ತು ತೋಟಗಾರಿಕೆ ಕೇಂದ್ರದ ಸಸ್ಯರೋಗ ಶಾಸ್ತ್ರದ ಮುಖ್ಯಸ್ಥ ಆರ್.ಗಣೇಶನಾಯ್ಕ, ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣೆ ತತಜ್ಞರು ಡಾ.ಆರ್.ಗಿರೀಶ್, ತರೀಕೆರೆ ತೋಟಗಾರಿಕೆ ಸಹಾಯಕ ನಿರ್ದೇಶಕರಾದ ಟಿ.ಎಸ್.ವಿಜಯಲಕ್ಷ್ಮಿ, ಚೇತನ್, ರೇಣುಕಾರಾದ್ಯ ತಂಡದಲ್ಲಿ ಇದ್ದರು.