ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕರ್ತವ್ಯ ನಿಷ್ಠೆಯಿಂದ ಸಂಘಗಳ ಅಭಿವೃದ್ಧಿ

Rashmi Kasaragodu
Updated On : 25 Jun 2014, 11:05 am

ಬಾಳೆಹೊನ್ನೂರು: ಯಾವುದೇ ಸಂಘ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರು ನಿರ್ವಂಚನೆಯಿಂದ ಕಾರ್ಯನಿರ್ವಹಿಸಿದಲ್ಲಿ ಮಾತ್ರ ಸಂಘದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಡಿ.ಎನ್. ಜೀವರಾಜ್ ಹೇಳಿದರು.
ಸಮೀಪದ ಹೇರೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ಗೋದಾಮು ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಕೊಪ್ಪ ತಾ. ಹೇರೂರು ಹಾಗೂ ಸೀತೂರು ಸೊಸೈಟಿಗಳು ರೈತರಿಗೆ ಸಕಾಲದಲ್ಲಿ ಅತೀ ಹೆಚ್ಚು ಗೊಬ್ಬರ ಪೂರೈಸಿವೆ. ಬಿತ್ತನೆ ಬೀಜ, ಸಾಲ ನೀಡಿಕೆಯಲ್ಲೂ ಮುಂದಿವೆ ಎಂದ ಅವರು, ಅಭಿವೃದ್ಧಿಯನ್ನು ಎಂದಿಗೂ ಎಕ್ಸ್‌ರೇ ಕಣ್ಣಿನಿಂದ ನೋಡಬಾರದು ಎಂದು ಹೇಳಿದರು.
ಹೆಣ್ಣು ಮಕ್ಕಳಿಗೆ ಸಮಾಜದಲ್ಲಿ ಅತ್ಯಂತ ಗೌರವ ಸ್ಥಾನ ಇದೆ. ರಾಜಕೀಯ ಉದ್ದೇಶಗಳಿಗಾಗಿ ಹೆಣ್ಣುಮಕ್ಕಳನ್ನು ಬಳಸಿಕೊಂಡು ದೂರು ನೀಡುವ ಕೆಲಸ ಇಂದು ನಡೆಯುತ್ತಿರುವುದು ಅತ್ಯಂತ ನೋವಿನ ಸಂಗತಿ ಎಂದರು.
ಕ್ಷೇತ್ರದಲ್ಲಿ ರಾಜಕೀಯ ನಾಯಕರ ಮನಸ್ಥಿತಿಗೆ ಅನುಗುಣವಾಗಿ ದ್ವೇಷ ಅಸೂಯೆಗಳಿಂದ ದೂರು ನೀಡುವ ಪ್ರವೃತ್ತಿ ಹೆಚ್ಚುತ್ತಿದೆ. ಇದರ ಪರಿಣಾಮ ಶಾಂತಿ ಕದಡುತ್ತಿದೆ. ಇದು ಸಲ್ಲದು. ಅಭಿವೃದ್ಧಿಗಾಗಿ ರಾಜಕೀಯ ಮಾಡೋಣ ಎಂದು ಹೇಳಿದರು.
ಜಿಪಂ ಸದಸ್ಯ ರವೀಂದ್ರ ಕುಕ್ಕುಡಿಗೆ ಮಾತನಾಡಿ, ಸದಸ್ಯರು ಸಂಘ ನೀಡುವ ಸೌಲಭ್ಯಗಳನ್ನು ಸದುಪಯೋಗಪಡಿಸಿ ಕೊಳ್ಳುವಂತೆ ಕರೆ ನೀಡಿದರು. ಪಿಎಸಿಎಸ್ ಅಧ್ಯಕ್ಷ ಸಿ.ವಿ. ರಾಜೇಶ್, ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಪಿ. ವಿಶ್ವನಾಥ್ ಮಾತನಾಡಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು ಹಾಗೂ ಉತ್ತಮ ವ್ಯವಹಾರ ನಡೆಸಿದ ಸ್ವ ಸಹಾಯ ಸಂಘ ಹಾಗೂ ಸಂಘದಲ್ಲಿ ಉತ್ತಮ ವ್ಯವಹಾರ ನಡೆಸಿದ ರೈತರನ್ನು ಸನ್ಮಾನಿಸಲಾಯಿತು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ.ಎಸ್. ಮಹಾಬಲ, ಹೇರೂರು ಗ್ರಾಪಂ ಅಧ್ಯಕ್ಷೆ ಶಾಂತಾ, ತಾಪಂ ಸದಸ್ಯೆ ಸುಜಾತ, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಕೆ.ಟಿ. ಜಗದೀಶ್, ಸಂಘದ ನಿರ್ದೇಶಕ ಎ.ಸಿ. ಸಂತೋಷ್, ಕೆ.ಸಿ. ವೆಂಕಟರಮಣ, ಸತೀಶ್ ಕೋಟ್ಯಾನ್, ಸಂಜೀವನಾಯ್ಕ, ಧನಲಕ್ಷ್ಮಿ, ಎಚ್.ಡಿ. ರಮೇಶ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement