ವರ್ಗಾವಣೆಗೊಂಡ ಪೊಲೀಸರಿಗೆ ಬೀಳ್ಕೊಡುಗೆ
ಮೂಡಿಗೆರೆ: ಕಳಸ ಪೊಲೀಸ್ ಠಾಣೆಯಿಂದ ವಿವಿಧ ಠಾಣೆಗಳಿಗೆ ವರ್ಗಾವಣೆಗೊಂಡಿರುವ ಪಿಎಸ್ಐ ಸಹಿತ ಓರ್ವ ಎಎಸ್ಐ, ಓರ್ವ ಸಿವಿಲ್ ಹೆಡ್ಕಾನ್ಸ್ಟೇಬಲ್ ಹಾಗೂ ನಾಲ್ವರು ಪೊಲೀಸ್ ಕಾನ್ಸ್ಟೇಬಲ್ರನ್ನು ಕಳಸ ಪೊಲೀಸ್ ಠಾಣೆಯಿಂದ ಬೀಳ್ಕೊಡಲಾಯಿತು.
ಕಳಸ ಠಾಣೆಯಲ್ಲಿ ಕಳೆದ ಎರಡುವರೆ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಪಿಎಸ್ಐ ರಾಮಚಂದ್ರ ನಾಯಕ್, ಎಸ್ಐ ಸುರೇಶ್, ಸಿವಿಲ್ ಹೆಡ್ಕಾನ್ಸ್ಟೇಬಲ್ ಮಂಜುನಾಥ್ ಎಸ್.ಸಿ, ಹಾಗೂ ಪೋಲೀಸ್ಕಾನ್ಸ್ಟೇಬಲ್ಗಳಾದ ನಂದನ್, ರಘು, ಕಾಂತ ರಾಜು, ಮಂಜುನಾಥ್ ಹೆಚ್. ಆರ್. ಅವರನ್ನು ಕಳಸ ಪೊಲೀಸ್ ಠಾಣೆಯಲ್ಲಿ ಸೋಮವಾರ ಸಂಜೆ ನಡೆದ ಸರಳ ಕಾರ್ಯಕ್ರಮದಲ್ಲಿ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಕುದುರೆಮುಖ ವೃತ್ತ ನಿರೀಕ್ಷಕ ಶಾಂತಕುಮಾರ್ ಸೇರಿದಂತೆ ಕಳಸ ಪೊಲೀಸ್ ಠಾಣೆಯ ಎಲ್ಲಾ ಸಿಬ್ಬಂದಿಗಳು ಹಾಜರಿದ್ದರು.