ಜಮೀನಿಗೆ ತೋಟಗಾರಿಕೆ ನಿರ್ದೇಶಕಿ ಭೇಟಿ
ಚಿಕ್ಕಮಗಳೂರು ತಾಲೂಕಿನ ಕಸಬಾ, ಅಂಬಳೆ ಹಾಗೂ ಲಕ್ಯಾ ಹೋಬಳಿಯ ಕೆಲವೆಡೆ ಅಂದರೆ ಈ ತಾಲೂಕಿನಲ್ಲಿ 1700 ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬಿತ್ತನೆಯಾಗಿದೆ. ಆಲೂಗಡ್ಡೆ ಬಿತ್ತನೆಯಾಗಿರುವ ಮಳಲೂರು, ಕೆ.ಆರ್.ಪೇಟೆ, ಅಂಬಳೆ, ಗುಡೇದಹಳ್ಳಿ ಪ್ರದೇಶಕ್ಕೆ ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಆರ್. ಸದಾನಂದ್ ಹಾಗೂ ಸಹಾಯಕ ನಿರ್ದೇಶಕಿ ಪೂರ್ಣಿಮಾ ಗುರುವಾರ ಭೇಟಿ ನೀಡಿ ಆಲೂಗಡ್ಡೆ ಬಿತ್ತನೆಯಾಗಿರುವ ಹೊಲಗಳನ್ನು ವೀಕ್ಷಿಸಿದರು.