ಶೃಂಗೇರಿ ಅಭಿವೃದ್ಧಿಗೆ ಆದ್ಯತೆ: ಸಾದಿಕ್ ಅಹ್ಮದ್
ಶೃಂಗೇರಿ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುವುದು ಎಂದು ನೂತನ ಅಧ್ಯಕ್ಷ ಎಂ.ಕೆ.ಸಾದಿಕ್ ಅಹ್ಮದ್ ತಿಳಿಸಿದರು. ಅವರು ಪಪಂ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದರು.
13 ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾಗಿರುವ ಅನುದಾನದಿಂದ ಪಟ್ಟಣದ ಬೀದಿ ದೀಪಗಳಿಗೆ ಎಲ್ಇಡಿ ಬಲ್ಬ್ ಅಳವಡಿಕೆ, ಕುಡಿಯುವ ನೀರು, ಘನ ತ್ಯಾಜ್ಯ ನಿರ್ವಹಣೆ, ಕಟ್ಟಡ ನಿರ್ಮಾಣ, ರಸ್ತೆ ದುರಸ್ಥಿ, ಉದ್ಯಾನವನ ನಿರ್ವಹಣೆ ಇತ್ಯಾದಿ ಕಾಮಗಾರಿ ನಡೆಯಲಿದೆ ಎಂದು ಹೇಳಿದರು.
ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗೇಶ್ಕಾಮತ್, ಸದಸ್ಯರಾದ ಸುಜಾತ, ಬಿ.ಎನ್.ಕೃಷ್ಣ, ಕೆ.ಎಂ.ಶ್ರೀನಿವಾಸ್, ಹರೀಶ್ಶೆಟ್ಟಿ, ಪಪಂ ಮುಖ್ಯಾಧಿಕಾರಿ ಅಶೋಕ್ ಇತರರು ಉಪಸ್ಥಿತರಿದ್ದರು. ರಾಜಶೇಖರ್ ಸ್ವಾಗತಿಸಿದರು.