ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮಹಿಳಾ ಜಾಗೃತಿ ಸಂಘದಿಂದ ಸ್ಟೀಲ್ ಲೋಟ ವಿತರಣೆ

Rashmi Kasaragodu
Updated On : 29 Jun 2014, 1:04 am

ಚಿಕ್ಕಮಗಳೂರು: ಶಿಕ್ಷಣ ಸಂಸ್ಥೆಗಳಿಗೆ ದಾನ- ಧರ್ಮ ಮಾಡಿದರೆ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಒತ್ತುಕೊಟ್ಟಂತಾಗಿ ಆರ್ಥಿಕವಾಗಿ ಹಿಂದುಳಿದ ಮಕ್ಕಳು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ಹೊರಹೊಮ್ಮುತ್ತಾರೆ ಎಂದು ಮಹಿಳಾ ಜಾಗೃತಿ ಸಂಘದ ಅಧ್ಯಕ್ಷೆ ಗೌರಮ್ಮ ಬಸವೇಗೌಡ ಹೇಳಿದರು.
ನಗರದ ವಿಶ್ವವಿದ್ಯಾಲಯ ವಿದ್ಯಾ ಸಂಸ್ಥೆಗೆ ಮಹಿಳಾ ಜಾಗೃತಿ ಸಂಘದಿಂದ ನೀಡಲಾದ ಸ್ಟೀಲ್ ಲೋಟಗಳನ್ನು ವಿತರಿಸಿ ಮಾತನಾಡಿದರು. ವಿದ್ಯಾಸಂಸ್ಥೆ ಅಧ್ಯಕ್ಷ ಎಂ.ಎಸ್. ನಂಜುಂಡಸ್ವಾಮಿ ಮಾತನಾಡಿದರು. ಮಹಿಳಾ ಜಾಗೃತಿ ಸಂಘದ ಸಹ ಕಾರ್ಯದರ್ಶಿ ಗೀತಾ ಸುಂದರೇಶ್, ನಿರ್ದೇಶಕರಾದ ಸುಲೋಚನಾ ಶೇಖರ್, ಕಾಂತಾ ಸತ್ಯನಾರಾಯಣ, ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಎಚ್. ಎಸ್. ರಾಮಚಂದ್ರ, ಮುಖ್ಯೋಪಾಧ್ಯಾಯರಾದ ಆರ್. ಶ್ರೀನಿವಾಸ್, ಪಿ.ಎನ್. ವಾಳದ, ಸಹ ಶಿಕ್ಷಕಿ ವಿಜಯಲಕ್ಷ್ಮೀ, ಎಚ್.ಆರ್. ಪದ್ಮಜ ವೇದಿಕೆಯಲ್ಲಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement