ರಂಭಾಪುರಿ ಶ್ರೀಗಳ ಶ್ರಾವಣ ತಪೋನುಷ್ಠಾನ
ಬಾಳೆಹೊನ್ನೂರು: ಇಲ್ಲಿನ ರಂಭಾಪುರಿಪೀಠದ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದ ಸ್ವಾಮೀಜಿ ಅವರ 23ನೇ ವರ್ಷದ ಶ್ರಾವಣ ತಪೋನುಷ್ಠಾನ ಸಮಾರಂಭ ಜುಲೈ 27 ರಿಂದ ಆಗಸ್ಟ್ 25ರವರೆಗೆ ನಡೆಯಲಿದೆ. ಶ್ರಾವಣ ಮಾಸದಲ್ಲಿ ರಂಭಾಪುರಿ ಶ್ರೀಗಳು ಇಷ್ಟಲಿಂಗ ಪೂಜಾನುಷ್ಠಾನ ಕೈಗೊಳ್ಳುವ ಮೂಲಕ ನಿರಂತರ ಒಂದು ತಿಂಗಳ ಕಾಲ ಲೋಕಕಲ್ಯಾಣಾರ್ಥ ಪೂಜೆ ನೆರವೇರಿಸಲಿದ್ದಾರೆ. ಹಾಗೂ ಧರ್ಮ ಸಮಾರಂಭದಲ್ಲಿ ಆಶೀರ್ವಚನ ನೀಡಲಿದ್ದಾರೆ.
ಪರಿಸರ ಮಾಹಿತಿ
ಬಾಳೆಹೊನ್ನೂರು: ಇಲ್ಲಿಗೆ ಸಮೀಪದ ಬಂಡಿಹೊಳೆಯ ಶ್ರೀಪತಿಖಾನ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪರಿಸರ ಮಾಹಿತಿ ಕಾರ್ಯಕ್ರಮ ನಡೆಯಿತು.
ಚಿನ್ನಿಗಾ-ಜನ್ನಾಪುರದಲ್ಲಿ ಕಂಪ್ಯೂಟರ್ ಕೇಂದ್ರ ಉದ್ಘಾಟನೆ
ಮೂಡಿಗೆರೆ: ತಾಲೂಕಿನ ಚಿನ್ನಿಗಾ-ಜನ್ನಾಪುರ ಹಿರಿಯ ಪ್ರಾಥಮಿಕ ಶಾಲೆಯ ಕಂಪ್ಯೂಟರ್ ಕೇಂದ್ರವನ್ನು ತಾ.ಪಂ. ಪ್ರಭಾರಿ ಅಧ್ಯಕ್ಷೆ ನೇಪಾ ಆದಿತ್ಯ ಮತ್ತು ಜಿಪಂ ಸದಸ್ಯ ವಿ.ಕೆ.ಶಿವೇಗೌಡ ಉದ್ಘಾಟಿದರು. ನಂತರ ಜಿಪಂ ಸದಸ್ಯ ವಿ. ಕೆ. ಶಿವೇಗೌಡ ಮಾತನಾಡಿ, ಆಧುನಿಕ ಯುಗದಲ್ಲಿ ಪ್ರಾಥಮಿಕ ಶಾಲಾ ಮಕ್ಕಳ ಜ್ಞಾನಾರ್ಜನೆಗೆ ಕಂಪ್ಯೂಟರ್ ಅಗತ್ಯವಾಗಿದೆ. ವೇಗದ ಶಿಕ್ಷಣದಿಂದ ಸಮಾಜದ ಸುಧಾರಣೆ ಸಾಧ್ಯವಾಗಲಿದೆ. ಈ ಶಾಲೆಗೆ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯಿಂದ ಅನುದಾನ ಮಂಜೂರಾತಿ ಮಾಡಿಸಿ ಅಗತ್ಯ ಕಾಮಗಾರಿ ನಡೆಸುವುದಾಗಿ ಭರವಸೆ ನೀಡಿದರು. ಎಸ್ಡಿಎಂಸಿ ಅಧ್ಯಕ್ಷ ಕಿರುಗುಂದ ಅಬ್ಬಾಸ್ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ.ಸದಸ್ಯ ಎ.ಜೆ.ಸುಬ್ರಾಯ, ಗ್ರಾ.ಪಂ. ಅಧ್ಯಕ್ಷೆ ರಮೀಜಾ, ಉಪಾಧ್ಯಕ್ಷ ಸಿ.ವಿ.ಸುದೀಪ್, ಸದಸ್ಯರಾದ ಸುನೀಲ್ ಕುಮಾರ್, ಪ್ರವೀಣ್ ಕುಮಾರ್, ಚನ್ನಕೇಶವ, ಮುಖ್ಯ ಶಿಕ್ಷಕ ಬಾಲಾಜಿ ನಾಯಕ್, ಪುಟ್ಟಯ್ಯ, ಮಲ್ಲಿಕಾ, ಸುಧಾಕರ್, ತಿಪ್ಪೇಸ್ವಾಮಿ ಸುರೇಖಾ ಮತ್ತಿತರರಿದ್ದರು.