ವೈಚಾರಿಕ ನೆಲೆಗಟ್ಟಿನಲ್ಲಿ ಸಾಗುತ್ತಿರುವ ಬಿಜೆಪಿ: ಸಿ.ಟಿ. ರವಿ
ಚಿಕ್ಕಮಗಳೂರು: ಬಿಜೆಪಿ ಗುರಿ ಅಧಿಕಾರಕ್ಕೆ ಸೀಮಿತವಲ್ಲ. ಈ ದೇಶ ಎಲ್ಲ ರಂಗದಲ್ಲೂ ಸರ್ವತೋಮುಖ ಅಭಿವೃದ್ಧಿ ಹೊಂದಬೇಕೆಂಬ ವೈಚಾರಿಕ ನೆಲೆಗಟ್ಟಿನಲ್ಲಿ ನೆಡೆಯುತ್ತಿರುವ ಪಕ್ಷ ಬಿಜೆಪಿ ಎಂದು ಶಾಸಕ ಸಿ.ಟಿ. ರವಿ ಹೇಳಿದರು.
ಜಿಲ್ಲಾ ಬಿಜೆಪಿ ಕಚೇರಿ “®ÛM^Úd«ÚÀ’¥ÚÆÇ ಶನಿವಾರ ನಡೆದ ಜಿಲ್ಲಾ ಮಟ್ಟದ ಪದಾಧಿಕಾರಿಗಳ ವಿಶೇಷ ಸಭೆ ಮತ್ತು ಗ್ರಾಪಂ ಹಾಗೂ ಸಹಕಾರಿ ಕ್ಷೇತ್ರಗಳ ಚುನಾವಣಾ ಪೂರ್ವ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಆಕ್ರಮಣ ತಡೆಯಲು ಮತ್ತು ಮಾಡಲು, ಎದುರಾಳಿಗಳು ನಮ್ಮ ಮೇಲೆ ಆಕ್ರಮಣ ಮಾಡುವ ಧೈರ್ಯವೂ ತೋರಿಸಬಾರದ ರೀತಿ ದೇಶ ಸೈನ್ಯ ಸನ್ನದ್ಧ ಸ್ಥಿತಿಯಲ್ಲಿರಬೇಕು. ಚುನಾವಣೆ ನಂತರ ಕಾರ್ಯ ಚಟುವಟಿಕೆಯನ್ನು ಸ್ಥಗಿತಗೊಳಿಸುವ ಪಕ್ಷ ನಮ್ಮದಲ್ಲ. ಅಧಿಕಾರವಿದ್ದಾಗ ಅಭಿವೃದ್ಧಿ ಕಾರ್ಯಗಳ ಮೂಲಕ ಜನರ ಸಮಸ್ಯೆಗಳನ್ನು ಅರ್ಥ ಮಾಡಿ, ವಿರೋಧ ಪಕ್ಷದಲ್ಲಿದ್ದಾಗ ಹೋರಾಟದ ಮೂಲಕ ಬಡಜನರ ಧ್ವನಿಯಾಗಿ ಎಂದು ಹೇಳಿದ ಅವರು, ದೇಹ ದುರ್ಬಲವಾದರೆ ರೋಗ ಬರುತ್ತದೆ. ಸಂಘಟನೆ ದುರ್ಬಲವಾದಾಗ ರಾಜಕೀಯ ಅಧಿಕಾರ ಕಳೆದುಕೊಳ್ಳುತ್ತದೆ ಎಂದರು.
ಜಿಲ್ಲಾಧ್ಯಕ್ಷ ಹಾಗೂ ಶಾಸಕ ಡಿ.ಎನ್. ಜೀವರಾಜ್ ಮಾತನಾಡಿ, ಬಿಜೆಪಿ ಕಾರ್ಯಕರ್ತರು ಸಂಘಟನೆಗೆ ಶಕ್ತಿ ತುಂಬುವ ಕೆಲಸ ಮಾಡಬೇಕು. ಹೋರಾಟದ ಮೂಲಕ ಜನರ ಸಮಸ್ಯೆಗೆ ಮತ್ತು ಕ್ಷೇತ್ರದ ಅಭಿವೃದ್ಧಿಗೆ ಸ್ಪಂದಿಸಬೇಕು ಎಂದು ಹೇಳಿದರು.
ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಜೆ.ಹೆಚ್. ರೇಖಾ ಹುಲಿಯಪ್ಪಗೌಡ, ಕಾರ್ಯದರ್ಶಿ ಶ್ಯಾಮಲಾ, ಮಾಜಿ ಜಿಲ್ಲಾಧ್ಯಕ್ಷರಾದ ಎಂ.ಕೆ. ಪ್ರಾಣೇಶ್, ಎಂ.ಎಸ್. ಭೋಜೇಗೌಡ, ಜಿಲ್ಲಾ ಪಂಚಾಯಿತಿ ಪ್ರಭಾರಿ ಅಧ್ಯಕ್ಷ ಶೃಂಗೇರಿ ಶಿವಣ್ಣ, ಸದಸ್ಯ ಕಲ್ಮರುಡಪ್ಪ, ಗಣೇಶ್ ರಾವ್, ಮಾಜಿ ಸದಸ್ಯ ರಾಮಸ್ವಾಮಿ, ನಗರಸಭೆ ಸದಸ್ಯ ಹೆಚ್.ಡಿ. ತಮ್ಮಯ್ಯ, ಮಾಜಿ ಅಧ್ಯಕ್ಷ ಸಿ.ಆರ್. ಪ್ರೇಂಕುಮಾರ್ ಇದ್ದರು.