ಶಾ ಚಾರಿಟೇಬಲ್ ಟ್ರಸ್ಟ್ನಿಂದ ನೋಟ್ಬುಕ್ ವಿತರಣೆ
ಚಿಕ್ಕಮಗಳೂರು: ನಗರದ ಶಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಇತ್ತಿಚೆಗೆ ಅರಿಶಿಣಗುಪ್ಪೆಯಲ್ಲಿ ಬಡ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಪುಸ್ತಕ ವಿತರಿಸಿ ಮಾತನಾಡಿದ ಮ್ಯಾನೇಜಿಂಗ್ ಟ್ರಸ್ಟಿ ಸೀತಾರಾಮ್ ಭರಣ್ಯ, ಪುಸ್ತಕ ಪಡೆದವರು ಶೇ. 75 ಅಂಕ ಪಡೆದಲ್ಲಿ ಪ್ರತಿವರ್ಷ ಆ ವಿದ್ಯಾರ್ಥಿಗೆ ಉಚಿತವಾಗಿ ವಿದ್ಯಾರ್ಥಿಜೀವನ ಕೊನೆಗೊಳ್ಳುವವರೆಗೂ ಪುಸ್ತಕ ನೀಡಲಾಗುವುದು ಎಂದರು. ತಿಂಗಳಿಗೊಮ್ಮೆ ವಿದ್ಯಾರ್ಥಿಯ ಮನೆಗೆ ಭೇಟಿ ನೀಡಿ ಶೈಕ್ಷಣಿಕ ಪ್ರಗತಿ ಗಮನಿಸಲಾಗುವುದು ಮತ್ತು ಆ ವಿದ್ಯಾರ್ಥಿಗೆ ಅವಶ್ಯಕತೆ ಇರುವ ವಿಷಯಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು. ದಾನಿಗಳ ಸಹಕಾರದೊಂದಿಗೆ ಈ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ ನೂರು ಜನ ಬಡ ವಿದ್ಯಾರ್ಥಿಗಳಿಗೆ ನೋಟ್ ಬುಕ್ ನೀಡುತ್ತೇವೆ ಎಂದರು. ಟ್ರಸ್ಟಿಗಳಾದ ಸಿ.ಜಿ. ಹರೀಶ್, ಸಿ. ಅಶ್ವಿನ್, ಮಾರ್ದನಿ ಸಂಚಾಲಕ ಶಾಶ್ವತ್, ಯುವ ನಾಯಕ ವಿನೋದ್ ಕುಮಾರ್ ದಾಸರಹಳ್ಳಿ ಉಪಸ್ಥಿತರಿದ್ದರು.