ರೈಲು ಹತ್ತುವಾಗ ಬಿದ್ದು ವ್ಯಕ್ತಿ ಸಾವು
ಕಡೂರು: ರೈಲು ಹತ್ತುವಾಗ ಆಯತಪ್ಪಿ ಸಿಲುಕಿ ತಾಲೂಕಿನ ಹಿರೇನಲ್ಲೂರಿನ ಗ್ರಾಮ ಸಹಾಯಕ ಸೋಮಶೇಖರ್ ಎಂಬವರು ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.
ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೋಮಶೇಖರ್ ಬೆಳಿಗ್ಗೆ 6.45ರಲ್ಲಿ ತಮ್ಮ ಅಣ್ಣನ ಮಕ್ಕಳ ಮದುವೆಗೆಂದು ಒಡವೆ ತರಲು ಹೆಣ್ಣು ಮಕ್ಕಳೊಂದಿಗೆ ಪಟ್ಟಣದಿಂದ ಹರಿಹರಕ್ಕೆ ತೆರಳುವ ರೈಲಿಗೆ ಹತ್ತಿ ಪ್ರಯಾಣ ಮಾಡುತ್ತಿದ್ದರು.
ಚಿಕ್ಕಜಾಜೂರಿನ ಬಳಿ ರೈಲು ನಿಲ್ಲಿಸಿದಾಗ ಸೋಮಶೇಖರ್ ಹೆಣ್ಣು ಮಕ್ಕಳನ್ನು ರೈಲಿನಲ್ಲಿ ಕೂರಿಸಿ ತಿಂಡಿ ತರಲು ತೆರಳಿದ್ದರು. ನಿಲ್ದಾಣದ ಕ್ಯಾಂಟೀನ್‌ನಿಂದ ತಿಂಡಿ ತೆಗೆದುಕೊಂಡು ಬರುವಾಗ ರೈಲು ಹೊರಟ ಭರದಲ್ಲಿ ತಿಂಡಿ ಹಿಡಿದುಕೊಂಡು ರೈಲು ಹತ್ತಲು ಯತ್ನಿಸಿದರು. ಈ ಸಂದರ್ಭ ಆಯತಪ್ಪಿ ರೈಲಿನ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.