ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ನಕಲಿ ಚಿನ್ನ ನೀಡಿ ವಂಚನೆ: ಆರೋಪಿ ನ್ಯಾಯಾಂಗ ವಶಕ್ಕೆ

Lingaraj Badiger
Updated On : 4 Mar 2014, 11:42 am

ಶೃಂಗೇರಿ:  ನಕಲಿ ಚಿನ್ನ ನೀಡಿ ವ್ಯಕ್ತಿಯೊಬ್ಬರನ್ನು ವಂಚಿಸಲು ಯತ್ನಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ಸೋಮವಾರ ಪಟ್ಟಣದಲ್ಲಿ ನಡೆದಿದೆ.
ಆರೋಪಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಶಿರಾಳಕೊಪ್ಪ ಮೂಲದ ರಾಜು ಅಲಿಯಾಸ್ ಚಂದ್ರ ಕಳೆದ ಫೆ.26 ರಂದು ಪಟ್ಟಣದ ಆನೆಗುಂದ ನಿವಾಸಿ ರಾಜೇಂದ್ರ ಎಂಬವರಿಗೆ ಅಸಲಿ ಕೊತ್ತಂಬರಿ ಬೀಜ ಮಾದರಿಯ ಚಿನ್ನದ ಮಣಿ ಸರ ತೋರಿಸಿದ್ದ. ಅಲ್ಲದೆ, ತನ್ನಲ್ಲಿ ಕಡಿಮೆ ಬೆಲೆಗೆ 2 ಲಕ್ಷ ರು.ಗೆ 1.4 ಕಿ.ಗ್ರಾಂ. ಬಂಗಾರದ ಸರ ಮಾರಾಟ ಮಾಡಲು ಇರುವುದಾಗಿ ಆಮಿಷವೊಡ್ಡಿದ್ದ.
ಇದರಲ್ಲಿ ಮೋಸದ ಸುಳಿವು ಗ್ರಹಿಸಿದ ರಾಜೇಂದ್ರ ಪೊಲೀಸರಿಗೆ ಮಾಹಿತಿ ನೀಡಿ, ಪೋಲೀಸರ ನೆರವು ಪಡೆದು ಸೋಮವಾರ ಇದರ ವ್ಯವಹಾರ ದಿನ ನಿಗದಿಪಡಿಸಿದ್ದಾನೆ. ಆರೋಪಿ ಸೋಮವಾರ ಪಟ್ಟಣದ ನೇರಳಕೊಡಿಗೆ ಎಂಬಲ್ಲಿ ಬಂದಿಳಿದು, ತನ್ನಲ್ಲಿದ್ದ ಕೈಚೀಲವೊಂದರಿಂದ 1.432 ಕಿ.ಗ್ರಾಂ. ಮೌಲ್ಯದ ನಕಲಿ ಚಿನ್ನದ ಕೊತ್ತಂಬರಿ ಬೀಜ ಮಾದರಿಯ ಮಣಿ ಸರವನ್ನು ತೆಗೆದು ಹಣ ನೀಡುವಂತೆ ಕೇಳತೊಡಗಿದ್ದಾಗ ಮಫ್ತಿಯಲ್ಲಿದ್ದ ಸಿಪಿಐ ಸುದೀರ್ ಎಂ. ಹೆಗಡೆ ನೇತೃತ್ವದ ಪೊಲೀಸ್ ತಂಡ ಕೂಡಲೇ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿ, ನ್ಯಾಯಾಂಗ ವಶಕ್ಕೆ ನೀಡಿದೆ. ತನಿಖಾ ತಂಡದಲ್ಲಿ ಎಸೈ ರಾಜಶೇಖರ್, ಪ್ರಸನ್ನ ಭಟ್ ಮೊದಲಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement