ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸರ್ಕಾರದಿಂದ ಸಂತ ಸೇವಾಲಾಲ್ ಜಯಂತ್ಯುತ್ಸವ ಆಚರಿಸಲು ಪ್ರಯತ್ನ

Lingaraj Badiger
Updated On : 4 Mar 2014, 11:41 am

ತರೀಕೆರೆ: ಸಂತ ಸೇವಾಲಾಲ್ ಜಯಂತ್ಯುತ್ಸವವನ್ನು ಸರ್ಕಾರದಿಂದ ಆಚರಿಸಲು ಪ್ರಯತ್ನಿಸುವುದಾಗಿ ಶಾಸಕ ಜಿ.ಎಚ್. ಶ್ರೀನಿವಾಸ್ ತಿಳಿಸಿದ್ದಾರೆ.
ತರೀಕೆರೆ ತಾಲೂಕು ಬಂಜಾರ ಬಳಗ, ಭಾರತ್ ಬಂಜಾರ ಸೇವಾಲಾಲ್ ಸೇನೆ ತರೀಕೆರೆ ವತಿಯಿಂದ ಪಟ್ಟಣದ ಬಯಲು ರಂಗ ಮಂದಿರದಲ್ಲಿ ಸಂತ ಸೇವಾಲಾಲ್  ಮಹಾರಾಜರ 275ನೇ ಜಯಂತ್ಯುತ್ಸವದಲ್ಲಿ ಏರ್ಪಾಡಾಗಿದ್ದ ಧರ್ಮ ಸಂದೇಶ ಮತ್ತು ಜನಜಾಗೃತಿ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಸಿಎಂ ಜತೆ ಮಾತುಕತೆ: ಸೇವಾಲಾಲ್ ಮಹಾರಾಜರ ಜಯಂತ್ಯುತ್ಸವವನ್ನು ಸರ್ಕಾರದ ವತಿಯಿಂದ ಆಚರಿಸುವ ಕುರಿತು ತಾವು ಮುಖ್ಯಮಂತ್ರಿಗಳ ಜತೆ ಮಾತನಾಡುವುದಾಗಿ ತಿಳಿಸಿದ ಅವರು, ನೀವು ಕಷ್ಟ ಜೀವಿಗಳು, ಮೂಢನಂಬಿಕೆಗಳಿಂದ ಹೊರಬರಬೇಕು ಎಂದು ಮನವಿ ಮಾಡಿದರು.
ಬಿ. ಕೃಷ್ಣಾನಾಯ್ಕ್ ಮಾತನಾಡಿ, ಪ್ರತಿವರ್ಷ ಫೆ.14ರಂದು ಸೇವಾಲಾಲ್ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಸೇವಾಲಾಲ್ ಭವನ ನಿರ್ಮಾಣಕ್ಕೆ ಸರ್ಕಾರ ಆರ್ಥಿಕ ನೆರವು ನೀಡಿದೆ. ತಾಂಡ್ಯ ಅಭಿವೃದ್ಧಿ ನಿಗಮ ಕೂಡ ಆಗಿದೆ. ಕಂದಾಯ ಗ್ರಾಮಗಳನ್ನು ಗುರುತಿಸಲು ವಿಶೇಷ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ಶಿವಮೊಗ್ಗ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಗಣೇಶ್ ಮಾತನಾಡಿ, ಸಮಸ್ಯೆಗಳು ಇನ್ನೂ ಜೀವಂತವಾಗಿದೆ. ರಾಜ್ಯಾದ್ಯಂತ ಸಂಘಟನೆಯಾಗಬೇಕು. 14 ರಾಷ್ಟ್ರಗಳಲ್ಲಿ ಬಂಜಾರ ಬಳಗ ಇದೆ. ನಮ್ಮ ಸಂಸ್ಕೃತಿ ಮರೆಯಬಾರದು ಎಂದರು.
ಬಂಜಾರ ಬಳಗದ ಅಧ್ಯಕ್ಷ ಯೋಗೇಂದ್ರಕುಮಾರ್ ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ ಸಂಘಟನೆ ನಮ್ಮ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ. ಈ ಬುಡಕಟ್ಟು ಸಮುದಾಯ ಗುರುತಿಸುವ ಮೂಲಕ ಅಭಿವೃದ್ಧಿಗೆ ಮಾನ್ಯತೆ ನೀಡಬೇಕು ಎಂದು ತಿಳಿಸಿದರು.
ಜಿಪಂ ಸದಸ್ಯರಾದ ಕೆ.ಪಿ.ಕುಮಾರ್, ಮಾಲಿನಿಬಾಯಿ ಮತ್ತಿತರರು ಮಾತನಾಡಿದರು.
ಜಿಪಂ ಸದಸ್ಯೆ ಹೇಮಾವತಿ ಕೃಷ್ಣಪ್ಪ, ಜಿಪಂ ಮಾಜಿ ಅಧ್ಯಕ್ಷ ಕೆ.ಆರ್. ಧ್ರುವಕುಮಾರ್, ಎಸ್.ಎ. ಕೃಷ್ಣಪ್ಪ, ಬಂಜಾರ ಸಂಘದ ಮಾಜಿ ಅಧ್ಯಕ್ಷ ಎಚ್. ರಾಮಾನಾಯ್ಕ, ಎಚ್.ಎ. ಲೋಕ್ಯಾನಾಯ್ಕ, ಬಿ.ಶೇಖರ್ ನಾಯ್ಕ್ ಟಿ. ವಿಜಯಾನಾಯ್ಕ್, ಎಚ್.ಎಲ್. ಮಂಜುನಾಥ್, ಸೇವಾನಾಯ್ಕ್, ಕೀರ್ಯಾನಾಯ್ಕ್ ದಾಸುನಾಯ್ಕ, ಚೆನ್ನಾನಾಯ್ಕ, ರಮೇಶ್, ಕುಮಾರ ನಾಯ್ಕ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಉಮೇಶ್ ನಾಯ್ಕ್ ಅವರ ಕ್ರಾಂತಿ ಖಡ್ಗ ಪತ್ರಿಕೆ ಮತ್ತು ಶೇಖರ್ ನಾಯ್ಕ್ ಅವರ ಕವನ ಸಂಗ್ರಹ ಕೃತಿ ಬಿಡುಗಡೆ ಮಾಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement