ಸುದ್ದಿ ಸಂಕ್ಷೇಪ
ತಾಪಂ ಸಾಮಾನ್ಯ ಸಭೆ
ತರೀಕೆರೆ: ತಾಲೂಕು ಪಂಚಾಯಿತಿ ಸರ್ವ ಸದಸ್ಯರ ಸಾಮಾನ್ಯ ಸಭೆಯನ್ನು ಮಾ. 6 ರಂದು ಬೆಳಗ್ಗೆ 11 ಗಂಟೆಗೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ಶಕುಂತಲಾ ನಾಗರಾಜು ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಇಂದು ಕೆಡಿಪಿ ಸಭೆ
ನರಸಿಂಹರಾಜಪುರ: ತಾಲೂಕು ಪಂಚಾಯ್ತಿ ಅಧ್ಯಕ್ಷ ಜೆ.ಜಿ. ನಾಗರಾಜ್ ಅಧ್ಯಕ್ಷತೆಯಲ್ಲಿ ಮಾಸಿಕ ಕೆ.ಡಿ.ಪಿ. ಸಭೆ ಮಾ. 5 ರ ಬುಧವಾರ ಬೆಳಗ್ಗೆ 11 ಗಂಟೆಗೆ ಸಾಮರ್ಥ್ಯ ಸೌಧದಲ್ಲಿ ನಡೆಯಲಿದೆ ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ.
ವಿದ್ಯುತ್ ನಿಲುಗಡೆ
ತರೀಕೆರೆ: ತರೀಕೆರೆ ಹಾಗೂ ನೇರಲಕೆರೆ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ 100 ಕೆ.ವಿ.ಮತ್ತು 11 ಕೆ.ವಿ ಉಪಕರಣಗಳ ತ್ರೈಮಾಸಿಕ ನಿರ್ವಹಣಾ ಕಾರ್ಯ ಇರುವುದರಿಂದ ಮಾರ್ಚ್ 5 ರಂದು ತರೀಕೆರೆ ಮತ್ತು ನೇರಲಕೆರೆ ವಿದ್ಯುತ್ ವಿತರಣಾ ಕೇಂದ್ರಗಳಿಂದ ಹೊರಹೋಗುವ ಎಲ್ಲಾ ಪೀಡರ್‌ಗಳನ್ನು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಸ್ಥಗಿತಗೊಳಿಸಲಾಗುವುದು ಎಂದು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೋರಿದ್ದಾರೆ.
ಚೆಕ್ ವಿತರಣೆ
ಕೊಪ್ಪ: ಶೃಂಗೇರಿ ಕ್ಷೇತ್ರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ರೈತ ಸಂಜೀವಿನಿ ಯೋಜನೆಯಡಿ ಕೃಷಿ ಕಾರ್ಯದಲ್ಲಿ ಬಿದ್ದು ಪೆಟ್ಟು ಮಾಡಿಕೊಂಡಿದ್ದ ಚೌಡಿಕಟ್ಟೆಯ ಕೇಶವಗೌಡರಿಗೆ ರು. 15,000 ಪರಿಹಾರದ ಚೆಕ್ಕನ್ನು ಮಂಗಳವಾರ ವಿತರಿಸಿತು. ಎಪಿಎಂಸಿ ಅಧ್ಯಕ್ಷ ಓಣಿತೋಟ ರತ್ನಾಕರ್ ನೇತೃತ್ವದ ನಿರ್ದೇಶಕ ಮಂಡಳಿ ಸದಸ್ಯರು ಕೇಶವಗೌಡ ಮನೆಗೆ ತೆರಳಿ ಯೋಗಕ್ಷೇವು ವಿಚಾರಿಸಿ ಪರಿಹಾರದ ಚೆಕ್ ವಿತರಿಸಿದರು. ಸಮಿತಿ ನಿರ್ದೇಶಕ ಕಾರೆಗದ್ದೆ ಚಂದ್ರೇಗೌಡ, ದತ್ತಾತ್ರೇಯ ಹೇರಳೆ, ಬೆನ್ನಿ ಸುಬ್ರಮಣ್ಯ, ಚಂದ್ರಶೇಖರ್ ಇದ್ದರು.