ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

9ರಂದು ಮಹಾರಥೋತ್ಸವ

Lingaraj Badiger
Updated On : 6 Mar 2014, 10:47 am

ಶೃಂಗೇರಿ: ಶಾರದಾ ಪೀಠದ ಕ್ಷೇತ್ರಪಾಲಕಿ ದೇವತೆ ಹರಾವರಿ ದುರ್ಗಾಂಬೆ ಮಹಾರಥೋತ್ಸವ ಮಾ. 9ರ ಭಾನುವಾರ ನಡೆಯಲಿದೆ.
ಜಗದ್ಗುರು ಶಂಕರ ಭಗವತ್ಪಾದಾಚಾರ್ಯರು ಶೃಂಗೇರಿಯಲ್ಲಿ ಶಾರದಾಂಬೆಯನ್ನು ಪ್ರತಿಷ್ಠಾಪಿಸಿದ ಕ್ಷೇತ್ರದ ರಕ್ಷಣೆಗಾಗಿ, ಯಾವುದೇ ರೀತಿಯ ತೊಂದರೆಯಾಗದಂತೆ ಪೀಠದ ನಾಲ್ಕು ದಿಕ್ಕುಗಳಲ್ಲಿಯೂ ನಾಲ್ಕು ರಕ್ಷಣಾ ದೇವತೆಗಳನ್ನು ಪ್ರತಿಷ್ಠಾಪಿಸಿದ್ದರು. ಅವುಗಳಲ್ಲಿ ದುರ್ಗಾಂಬೆ ಪ್ರಮುಖ ದೇವತೆ.
ಫಾಲ್ಗುಣ ಮಾಸ ಶುಕ್ಲಪಕ್ಷದ ಮೃಗಶಿರ ನಕ್ಷತ್ರದಂದು ದುರ್ಗಮ್ಮನವರಿಗೆ ಜಗದ್ಗುರು ಭಾರತೀ ತೀರ್ಥ ಮಹಾಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಮಹಾರಥೋತ್ಸವ ಜರುಗಲಿದೆ. ಅಂದು ಶ್ರೀಗಳು ದುರ್ಗಾಂಬೆಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಧಾನ್ಯ ಹಾಗೂ ಪಾಯಸನ್ನ ಇಲ್ಲಿನ ವಿಶಿಷ್ಟ ಸೇವೆ.
ಭಕ್ತರು ದುರ್ಗಾಂಬೆ ಸನ್ನಿಧಿಯಲ್ಲಿ ದುರ್ಗಾಸಪ್ತಶತಿ ಪಾರಾಯಣ, ತುಲಾಭಾರ ಸೇವೆ, ಕುಂಕುಮಾರ್ಚನೆ ಸೇವೆ ಇತ್ಯಾದಿ ಸೇವೆ ಮಾಡಿಸುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement