ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮೀನುಗಾರರ ಸಹಕಾರ ಸಂಘಕ್ಕೆ ಅವಿರೋಧ ಆಯ್ಕೆ

Lingaraj Badiger
Updated On : 6 Mar 2014, 10:47 am

ಕ.ಪ್ರ.ವಾರ್ತೆ, ಕಡೂರು, ಮಾ.5
ತಾಲೂಕು ಮೀನುಗಾರರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಅಜ್ಜಯ್ಯ, ಉಪಾಧ್ಯಕ್ಷರಾಗಿ ಬಸವರಾಜು ಅವಿರೋಧವಾಗಿ ಆಯ್ಕೆಗೊಂಡರು.
ಪಟ್ಟಣದ ಬನಶಂಕರಿ ದೇವಾಲಯದ ಸಮೀಪದ ಟ್ರೈಬಲ್ ಮೀನುಗಾರರ ಸಹಕಾರ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆ ನಡೆಯಿತು. 13 ನಿರ್ದೇಕರಿರುವ ಸಂಘದಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಗಾದಿಗೆ ತಲಾ ಒಂದೊಂದು ನಾಮಪತ್ರ ಸಲ್ಲಿಕೆ ಆಗಿದ್ದ ಹಿನ್ನೆಲೆಯಲ್ಲಿ ಆಯ್ಕೆಯು ಸುಗಮವಾಗಿ ನಡೆಯಿತು.
ಚುನಾವಣಾಧಿಕಾರಿ ಟಿ.ಜೆ. ಪರಮೇಶ್ವರಪ್ಪ ಅವರು ಅಜ್ಜಯ್ಯನವರು ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಬಸವರಾಜು ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ಇದೇ ಸಂದರ್ಭ ಅಧ್ಯಕ್ಷ ಅಜ್ಜಯ್ಯ ಮಾತನಾಡಿ, ಕಳೆದ ವಾರ ನಡೆದ ಸಂಘದ ನಿರ್ದೇಶಕರ ಚುನಾವಣೆಯಲ್ಲಿ  ನಾನು ಸೇರಿಂದಂತೆ 13 ಜನ ನಿರ್ದೇಶಕರ ಆಯ್ಕೆ ನಡೆದಿದೆ. ಎಲ್ಲ ನಿರ್ದೇಶಕರು ತಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡಿ ಉನ್ನತ ಸ್ಥಾನ ನೀಡಿದ್ದಾರೆ. ನಮಗೆ ಸಿಕ್ಕಿರುವ ಈ ಅವಧಿಯಲ್ಲಿ ಎಲ್ಲರ ಸಲಹೆ ಸಹಕಾರದಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿ ಸದಸ್ಯರ ನಂಬಿಕೆ ಉಳಿಸಿಕೊಳ್ಳುತ್ತೇನೆ ಎಂದರು.
ಕಡೂರು ತಾಲೂಕು ಕಳೆದ ಹಲವು ವರ್ಷದಿಂದ ಬರಗಾಲಕ್ಕೆ ತುತ್ತಾಗಿ ಮಳೆ ಬಾರದೆ ಕೆರೆಗಳಲ್ಲಿ ನೀರು ಸಂಗ್ರಹವಾಗದೆ ಮೀನುಗಾರರ ಸ್ಥಿತಿ ಕಷ್ಟವಾಗಿತ್ತು. ಇಂತಹ ಸಂದರ್ಭದಲ್ಲಿ ಸರ್ಕಾರವು ನಮ್ಮ ಸಂಘದ ಅಭಿವೃದ್ಧಿಗೆ ಸಹಾಯ ನೀಡಿ ಮೀನುಗಾರರ ಸಹಾಯಕ್ಕೆ ಬರಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಂಘದ ನೂತನ ನಿದೇಶಕರಾದ ಶಿವಮೂರ್ತಿನಾಯ್ಕ, ಎಸ್.ಕೆ. ಜಗದೀಶ್, ಕಲೀಮ ಖಾನ್, ಎಸ್.ಕೃಷ್ಣಪ್ಪ, ಜಿ.ಜಿ. ಮಂಜುನಾಥ್, ಮುರುಗೇಶ್, ಕೆ.ಎಚ್. ರಘು, ಕಂಸಾಗರ ರಘು, ಟಿ.ಎನ್. ಪುಟ್ಟಸ್ವಾಮಿ, ಬಸವರಾಜನಾಯ್ಕ, ನೂರ್ ಜಹಾನ್, ಸರಸ್ವತಿ ಕೃಷ್ಣಮೂರ್ತಿ ಹಾಗೂ ಸಂಘದ ಕಾರ್ಯದರ್ಶಿ ಗಂಗಾಧರನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement