ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕವಿತೆ ನೋವಿಗೆ ಟಾನಿಕ್ ಇದ್ದಂತೆ

Lingaraj Badiger
Updated On : 7 Mar 2014, 11:26 am

ಕ.ಪ್ರ.ವಾರ್ತೆ, ಶೃಂಗೇರಿ, ಮಾ. 6
ಸಾಹಿತ್ಯ ನಿರಂತರವಾದ ಕಲಿಕೆ, ಇದಕ್ಕೆ ಅಂತ್ಯವಿಲ್ಲ. ಕವಿತೆ, ಕವನಗಳು ನಮ್ಮ ನೋವುಗಳನ್ನು ಮರೆವ ಒಂದು ತಾಣವಾಗಿದೆ ಎಂದು ರಂಗಕಲಾವಿದ ಜಮಾಲ್ ಬೇಗ್ ಸಾಹೇಬ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಡೆಯುತ್ತಿರುವ ಮೂರು ದಿನಗಳ ಕಲಾ ಉತ್ಸವದಲ್ಲಿ ನಡೆದ ಕವಿಗೋಷ್ಠಿ ಹಾಗೂ ಹಾಸ್ಯೋತ್ಸವದಲ್ಲಿ ಅವರು ಮಾತನಾಡಿದರು.
ಸಾಹಿತ್ಯ, ಸಂಗೀತ, ಕಲೆಯನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕು. ನಮ್ಮಲ್ಲಿರುವ ನೋವು-ದುಃಖಗಳಿಗೆ ಸ್ಪಂದಿಸಿ, ಅದನ್ನು ಮರೆಸುವ ಅದ್ಭುತ ಶಕ್ತಿ ಕವಿತೆಗಳಿಗಿದೆ. ಕವಿತೆ ರಚಿಸುವವರಿಗೆ ಕಾವ್ಯಪರಂಪರೆ, ಛಂದಸ್ಸಿನ ಅನುಭವ ಇರಬೇಕು. ಹಾಗೇಯೇ ಆತ್ಮವಿಮರ್ಷಾ ಶಕ್ತಿಯನ್ನು ಮೈಗೂಡಿಸಿಕೊಳ್ಳಬೇಕು. ಮನುಷ್ಯ ಜೀವನದಲ್ಲಿ ನಗಬೇಕು. ನಗು ನೋವಿಗೆ ಉತ್ತಮ ಟಾನಿಕ್ ಇದ್ದಂತೆ. ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಸಾಮರ್ಥ್ಯವಿರುವ ಹಾಸ್ಯ ಸಾಹಿತ್ಯವು ಮನುಷ್ಯ ಜೀವನದ ಬಿಂಬವಾಗಿದೆ. ಇದು ದಿನನಿತ್ಯ ಜೀವನದಲ್ಲಿ ಅರಿವಿಗೆ ಬಾರದಂತೆ ಹರಿಯುತ್ತಿದ್ದು ಕವಿಪ್ರತಿಭೆ, ಕವಿ ಸೃಷ್ಟಿಗೂ ಅವಕಾಶ ಕಲ್ಪಿಸಿಕೊಡುತ್ತದೆ. ಮಕ್ಕಳಲ್ಲಿಯೂ ಹಾಸ್ಯಪ್ರಜ್ಞೆ ಬೆಳೆಸಬೇಕು. ವಿದ್ಯಾರ್ಥಿಗಳು ಹಾಸ್ಯ ಕೃತಿಗಳನ್ನು, ಹಾಸ್ಯ ಅಂಕಣಗಳನ್ನು ಓದಬೇಕಿದೆ  ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಚಾರ್ಯ ಪ್ರೊ. ಕೆ.ಜಿ. ಸಿದ್ದಲಿಂಗೇಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ.ಕೆ. ಪುಟ್ಟಯ್ಯ,ಅಬ್ದುಲ್ ಕುನ್ಹಿ, ಆಶಾಲತಾ, ಮಮತಾ, ಶಿವಗುರು ಮತ್ತಿತರರು ಉಪಸ್ಥಿತರಿದ್ದರು. ಯುವಕವಿಗಳು ಕವಿಗೋಷ್ಠಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಮಾವಿಕಾ ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement