ನೇಣು ಬಿಗಿದು ರೋಗಿ ಆತ್ಮಹತ್ಯೆ
ಮೂಡಿಗೆರೆ: ಅನಾರೋಗ್ಯದಿಂದ ನರಳುತ್ತಿದ್ದ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ದಾಖಲಾಗಿ, ಬೆಳಗಿನ ಜಾವ ಶೌಚಾಲಯಕ್ಕೆ ಹೋದವನು ಶೌಚಾಲಯದ ಕಿಟಿಕಿಗೆ ಪಂಚೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಬೆಳಗ್ಗೆ ಮೂಡಿಗೆರೆ ಮಹಾತ್ಮಾಗಾಂಧಿ ಸ್ಮಾರಕ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ತಾಲೂಕಿನ ಗಬ್ಗಲ್ನ ನಡ್ನಳ್ಳಿಯ ಮಂಜುನಾಥ (62) ಮೃತಪಟ್ಟವರು. ಮಾರ್ಚ್ 5 ಬುಧವಾರದಂದು ಮೂಡಿಗೆರೆಯ ಮಹಾತ್ಮಾ ಗಾಂಧಿ ಸ್ಮಾರಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಬಗ್ಗೆ ಪತ್ನಿ ವನಿತಾ ಮೂಡಿಗೆರೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಖಲಾಗಿದೆ.