ಕುವೆಂಪು ವಿವಿ ರ್ಯಾಂಕ್ ಪಟ್ಟಿ ಪ್ರಕಟ
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗವು ಮೇ 2013ರಲ್ಲಿ ನಡೆಸಿದ್ದ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳ ರ್ಯಾಂಕ್ ಪಟ್ಟಿಯನ್ನು ಪ್ರಕಟಿಸಿದೆ. ಜಗದೀಶ್ ಎಚ್.ಪಿ., ಶಿಲ್ಪಾ ಎಚ್.ಎಸ್., ಜೆಸ್ಸೀನಾ ಕೆ.ಎ., ರಘುಕುಮಾರ ಎಲ್., ಮಹಾಲಕ್ಷ್ಮೀ ಎಚ್.ಎಲ್., ಶುಭಾ ಎಲ್.ಆರ್., ದಿವ್ಯಶ್ರೀ ಎಚ್.ಟಿ. ಮತ್ತು ಸುಮಲತಾ ವೈ.ಎಂ. ಕ್ರಮವಾಗಿ ಒಂದರಿಂದ ಎಂಟನೇ ರ್ಯಾಂಕ್ ಪಡೆದುಕೊಂಡಿದ್ದಾರೆ ಎಂದು ಮೌಲ್ಯಮಾಪನ ವಿಭಾಗದ ರಿಜಿಸ್ಟ್ರಾರ್ ತಿಳಿಸಿದ್ದಾರೆ.