ಅಬಾಕಸ್ ಸ್ಪರ್ಧೆ: ಬಾಳೆಹೊನ್ನೂರು ಕೇಂದ್ರಕ್ಕೆ ರ್ಯಾಂಕ್
ಬಾಳೆಹೊನ್ನೂರು: ಇತ್ತೀಚೆಗೆ ಹಾಸನದಲ್ಲಿ ನಡೆದ ಜಿಲ್ಲಾಮಟ್ಟದ ಹಾಗೂ ಬೆಂಗಳೂರಿನ ಯಲಹಂಕದ ವೆಂಕಟೇಶ್ವರ ಅಂತಾರಾಷ್ಟ್ರೀಯ ಶಾಲೆಯಲ್ಲಿ ನಡೆದ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಬಾಳೆಹೊನ್ನೂರು ಅಬಾಕಸ್ ಕೇಂದ್ರಕ್ಕೆ 5 ರ್ಯಾಂಕ್ ಹಾಗೂ 6 ಪ್ರಶಸ್ತಿ ಲಭಿಸಿವೆ. ಮ್ಯಾಟ್ರಿಕ್ ಅಬಾಕಸ್ ಕೇಂದ್ರದ ಕಡಬಗೆರೆ ಜ್ಯೋತಿರ್ವಿಕಾಸ ಶಾಲೆಯ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದಿದ್ದು, ಕಿರಿಯರ ವಿಭಾಗದಲ್ಲಿ ದರ್ಶನ್ ಪ್ರಥಮ ರ್ಯಾಂಕ್ ಪಡೆದಿದ್ದಾರೆ. ತೇಜಸ್ (9ನೇ ರ್ಯಾಂಕ್), ಅಪೇಕ್ಷಾ (15 ನೇ ರ್ಯಾಂಕ್), ಸುವಾಸ್ (28ನೇ ರ್ಯಾಂಕ್), ಸಂದರ್ಶ್ 3ನೇ ರ್ಯಾಂಕ್ ಪಡೆದಿದ್ದಾರೆ. ಇನ್ನುಳಿದಂತೆ ಮುಕ್ತಾ, ಸೃಜನ್, ವರ್ಷಿತಾ, ದೀಕ್ಷಾ ಪಟೇಲ್, ಸಾಕ್ಷಿ ಹಾಗೂ ಇಂದಿರಾ ಪ್ರಶಸ್ತಿ ಪಡೆದಿದ್ದಾರೆ. ಈ ವಿದ್ಯಾರ್ಥಿಗಳಿಗೆ ಅಬಾಕಸ್ ಕೇಂದ್ರದ ಪ್ರಾಚಾರ್ಯ ರೆನ್ನಿ ದೇವಯ್ಯ, ರಜನಿ ದೇವಯ್ಯ ತರಬೇತಿ ನೀಡಿದ್ದರು.