ಬಂದೂಕು ಒಪ್ಪಿಸಲು ಸೂಚನೆ
ನರಸಿಂಹರಾಜಪುರ: ಲೋಕಸಭಾ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಮಾ. 5 ರಿಂದ ಜಾರಿಗೆ ಬಂದಿರುವುದರಿಂದ ಭದ್ರತೆ ದೃಷ್ಟಿಯಿಂದ ತಕ್ಷಣ ಪರವಾನಿಗೆ ಹೊಂದಿದ ತಮ್ಮ ಬಂದೂಕುಗಳನ್ನು ಪೊಲೀಸ್ ಠಾಣೆಗೆ ತಂದು ಒಪ್ಪಿಸಬೇಕು ಎಂದು ಪೊಲೀಸ್ ಠಾಣಾಧಿಕಾರಿ ಮಂಜೇಶ್ವರ ಕೋರಿದ್ದಾರೆ.
ಕಾರ್ಮಿಕರ ಒಕ್ಕೂಟಕ್ಕೆ ಆಯ್ಕೆ
ಚಿಕ್ಕಮಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಾರ್ಮಿಕರ ಒಕ್ಕೂಟದ ಅಧ್ಯಕ್ಷರಾಗಿ ಎ.ಪಿ. ಗೋಪಾಲ್ ಹಾಗೂ ಕಾರ್ಯಾಧ್ಯಕ್ಷರಾಗಿ ಎಚ್.ಬಿ. ಸತ್ಯನಾರಾಯಣಮೂರ್ತಿ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಕೆ.ಬಿ. ರವಿರಾಜ್ ರೈ, ಉಪಾಧ್ಯಕ್ಷರಾಗಿ ಶಿವಕುಮಾರ್ ಮತ್ತು ಸ್ವಾಮಿನಾಥನ್, ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್, ಖಜಾಂಚಿಯಾಗಿ ಸಿ.ಆರ್. ಜಗದೀಶ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶರವಣ, ಶಿವಕುಮಾರ್, ಧನಂಜಯಶೆಟ್ಟಿ ಮತ್ತು ಬೆನಡಿಕ್ಟ್ ಡಿಸೋಜಾ ಆಯ್ಕೆಯಾಗಿದ್ದಾರೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಒಕ್ಕೂಟದ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿದೆ.