ಬೈಕ್ ಡಿಕ್ಕಿ: ಪಾದಚಾರಿ ಸಾವು
ನರಸಿಂಹರಾಜಪುರ: ಬೈಕ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ದೇವಸಿ (70) ಮೃತಪಟ್ಟವರು.
ಮೃತರು ಸುಂಕದಕಟ್ಟೆ ಸಮೀಪ ಜೊಳ್ಳಹಂಕಲು ಎಂಬಲ್ಲಿ ಕೃಷಿಕರಾಗಿದ್ದರು. ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಸಂದರ್ಭದಲ್ಲಿ ಎದುರಿನಿಂದ ಬೈಕ್ನಲ್ಲಿ ಬಂದ ನಾಗರಾಜ ಶೇಟ್ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿರುವುದರಿಂದ ತೀವ್ರವಾಗಿ ಪೆಟ್ಟಾದ ದೇವಸಿ ಅವರನ್ನು ತಕ್ಷಣ ನರಸಿಂಹರಾಜಪುರ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಯಿತು.
ಆದರೂ ಪ್ರಯೋಜನವಾಗದೇ ಮೃಪಟ್ಟಿದ್ದಾರೆ. ಮೃತರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ನರಸಿಂಹರಾಜಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
--