ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಶಾರ್ಟ್ ಸರ್ಕ್ಯೂಟ್: 5 ಕೋಟಿ ಚಹಾಪುಡಿ ಹಾನಿ

Lingaraj Badiger
Updated On : 9 Mar 2014, 10:27 am

ಕ.ಪ್ರ.ವಾರ್ತೆ, ಕೊಪ್ಪ, ಮಾ.8
ತಾಲೂಕಿನ ಮೈಸೂರು ಪ್ಲಾಂಟೇಷನ್‌ನ ಕೊರ್ಡಿರ್ಡಿಹಿತ್ಲು ಟೀ ಕಾರ್ಖಾನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಕಾರ್ಖಾನೆ ಸಂಪೂರ್ಣ ಸುಟ್ಟು ಕರಕಲಾಗಿದ್ದು, 5 ಕೋಟಿಗೂ ಹೆಚ್ಚು ನಷ್ಟವಾಗಿರುವ ಘಟನೆ ಶುಕ್ರವಾರ ಮಧ್ಯರಾತ್ರಿ ನಡೆದಿದೆ.
ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ಆಗಮಿಸಿತಾದರೂ, ಅದಾಗಲೇ ಇಡೀ ಕಾರ್ಖಾನೆಯನ್ನು ಬೆಂಕಿ ವ್ಯಾಪಿಸಿತ್ತು. ಕೊಪ್ಪ, ಎನ್.ಆರ್. ಪುರ, ಶೃಂಗೇರಿ ಅಗ್ನಿಶಾಮಕ ದಳದ ಸಿಬ್ಬಂದಿಯವರು ಶುಕ್ರವಾರ ರಾತ್ರಿ 12.30 ರಿಂದ ಶನಿವಾರ ಬೆಳಗ್ಗೆ 9 ಗಂಟೆಯವರೆಗೆ ಸತತ ಪರಿಶ್ರಮದಿಂದ ಬೆಂಕಿ ಪಕ್ಕದ ಕಟ್ಟಡಕ್ಕೆ ಅವರಿಸದಂತೆ ತಡೆಯುವಲ್ಲಿ ಯಶಸ್ವಿಯಾದರು.
30,000 ಕೆಜಿ ಟೀ ಹಾನಿ: ಟೀ ಕಾರ್ಖಾನೆಯಲ್ಲಿ ದಸ್ತಾನು ಇಟ್ಟಿದ 30,000 ಕೆಜಿ ಟೀ ಪುಡಿ ಸೇರಿದಂತೆ ಮಿಷನರಿ, ಕಟ್ಟಡ ಸೇರಿದಂತೆ ಇತರೆ ವಸ್ತುಗಳು ಬೆಂಕಿಗೆ ಅಹಾಹುತಿಯಾದ ಪರಿಣಾಮ ಸುಮಾರು 5 ಕೋಟಿಗೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ಕಂಪನಿಯ ವ್ಯವಸ್ಥಾಪಕರು ತಿಳಿಸಿದ್ದಾರೆ.
ಸ್ಥಳಕ್ಕೆ ಡಿವೈಎಸ್‌ಪಿ ವಿಶ್ವನಾಥ್ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. ಶೃಂಗೇರಿ ಶಾಸಕ ಡಿ.ಎನ್. ಜೀವರಾಜ್, ಜಿಪಂ ಮಾಜಿ ಅಧ್ಯಕ್ಷ ರಾಜೇಗೌಡ, ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಎಸ್.ಎನ್. ರಾಮಸ್ವಾಮಿ, ತಾಪಂ ಅಧ್ಯಕ್ಷರಾದ ಪದ್ಮಾವತಿ ರಮೇಶ್, ಉಪಾಧ್ಯಕ್ಷ ಪೂರ್ಣಚಂದ್ರ, ಸದಸ್ಯ ರಮೇಶ್ ಬೆಳಗೊಳ, ಟಿಎಪಿಸಿಎಂಎಸ್ ಅಧ್ಯಕ್ಷ ದಿನೇಶ್ ಹೊಸೂರು, ಎಪಿಎಂಸಿ ಅಧ್ಯಕ್ಷ ಓಣಿತೋಟ ರತ್ನಾಕರ್ ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿ ಸಾಂತ್ವನ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement