ಜೇಸಿ ಸಂಸ್ಥೆಯ ಸದಸ್ಯರಿಗೆ ತರಬೇತಿ
ನರಸಿಂಹರಾಜಪುರ: ಯಾವುದೇ ಸಂಸ್ಥೆಯ ಸಭೆಗಳು ಆಗಾಗ್ಗೆ ನಡೆಯುತ್ತಿದ್ದರೆ ಮಾತ್ರ ಆ ಸಂಸ್ಥೆಯ ಚಟುವಟಿಕೆಗಳು ಸದಸ್ಯರ ಅರಿವಿಗೆ ಬರುತ್ತದೆ ಎಂದು ಜೇಸಿ ವಲಯ 14 ರ ಉಪಾಧ್ಯಕ್ಷ ಪ್ರಸಾದ್ ತಿಳಿಸಿದರು.
ಜ್ವಾಲಾಮಾಲಿನಿ ಜೇಸಿ ಸಂಸ್ಥೆಯ ಆಶ್ರಯದಲ್ಲಿ ನಡೆದ ಜೇಸಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ಘಟಕಗಳ ನಿರ್ವಹಣೆ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ತರಬೇತಿ ನೀಡಿ ಮಾತನಾಡಿದರು. ಪ್ರತಿಯೊಬ್ಬ ಸದಸ್ಯರು ಸಭೆಗಳಲ್ಲಿ ಭಾಗವಹಿಸಬೇಕು. ಅವರಿಗೆ ಜೇಸಿ ಸಂಸ್ಥೆಯ ತತ್ವ, ಆದರ್ಶದ ಅರಿವು ಇರಬೇಕು. ಆಗ ಮಾತ್ರ ಆ ಜೇಸಿ ಘಟಕದ ಅಭಿವೃದ್ಧಿ ಸಾಧ್ಯ ಎಂದರು.
ಅಕ್ಷತ್, ಸಂತೋಷಕುಮಾರ್, ಅಭಿನವ ಗಿರಿರಾಜ್ ಇದ್ದರು.