ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ವಿತರಿಸಿದ ಸಾಧನಗಳ ಬಗ್ಗೆ ಅನುಮಾನ ಸಲ್ಲ'

Lingaraj Badiger
Updated On : 11 Mar 2014, 11:17 am

ಚಿಕ್ಕಮಗಳೂರು: ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಸಾಧನ ವಿತರಣೆಗಳ ಕುರಿತು ತಪ್ಪು ತಿಳಿವಳಿಕೆ ಬೇಡ. ಅಂತಹವುಗಳ ವಿರುದ್ಧ ಅಪಪ್ರಚಾರ ನಡೆಸುವುದು ಸರಿಯಲ್ಲ ಎಂದು ತಜ್ಞೆ ಡಾ. ಗೀತಾ ವೆಂಕಟೇಶ್ ಹೇಳಿದ್ದಾರೆ.
ಚಿಕ್ಕಮಗಳೂರು ರೋಟರಿ ಕ್ಲಬ್ ಹಾಗೂ ಬೆಂಗಳೂರಿನ ಲೈಫ್ ಸೌಂಡ್ ಮತ್ತು ಶ್ರವಣ ಕ್ಲಿನಿಕ್ ನಗರದ ರೋಟರಿ ಹಾಲ್‌ನಲ್ಲಿ ಏರ್ಪಡಿಸಿದ್ದ ಉಚಿತ ಕಿವಿ ಹಾಗೂ ಶ್ರವಣ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಶೇ.6ರಷ್ಟು ಜನರಿಗೆ ಶ್ರವಣ ಹಾಗೂ ವಾಕ್ ಶ್ರವಣದ ತೊಂದರೆ ಇದೆ, ಇನ್ನೂ ಶೇ.9 ಜನರಿಗೆ ಈ ಸಮಸ್ಯೆ ಇದ್ದರೂ ಅದನ್ನು ಅವರು ಕಡೆಗಣಿಸುತ್ತಾರೆಂದರು.
ಸಂಘ ಸಂಸ್ಥೆಗಳು ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಿದರೆ ಆಸ್ಪತ್ರೆಗಳನ್ನು ಉದ್ಧಾರ ಮಾಡಲು ಇಂತಹ ನಾಟಕ ಆಡುತ್ತಾರೆಂದು ಬೇರೆಯದೆ ಅರ್ಥ ಕಲ್ಪಿಸಲಾಗುತ್ತದೆ. ಹಾಗೆಯೇ ಕೆಲವರು ಉಚಿತವಾಗಿ ನೀಡಲಾದ ಸಾಧನಗಳನ್ನು ಮತ್ತು ಔಷಧಿಗಳನ್ನು ಅನುಮಾನದಿಂದ ನೋಡಿ ಎಸೆಯುತ್ತಾರೆ, ಇಂತಹದರ ಬಗ್ಗೆ ಆಸಕ್ತಿ ಇಲ್ಲದವರು ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗಾದರೂ ಈ ಅವಕಾಶ ಕಲ್ಪಿಸಿಕೊಡಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಟರಿ ಅಧ್ಯಕ್ಷ ಎಂ.ಆರ್. ರಘುನಂದನ್, ರೋಟರಿ ಇಂದಿನ ದಿನಗಳಲ್ಲಿ ಶಿಕ್ಷಣ ಹಾಗೂ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಜನಸಾಮಾನ್ಯರಿಗೆ ಅನುಕೂಲವಾಗಲು ವರ್ಷದಲ್ಲಿ 3-4 ಬಾರಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಲಿದೆ ಮತ್ತು ಉಚಿತವಾಗಿ ಸಾಧನಗಳನ್ನು ನೀಡಿ ಧನ ಸಹಾಯ ಮಾಡಲಿದೆ ಎಂದವರು ಹೇಳಿದರು.
ಮುಂದಿನ ದಿನಗಳಲ್ಲಿ ಹೃದಯ ಮೊದಲಾದ ಕಾಯಿಲೆಗಳಿಗೆ ಉಚಿತ ತಪಾಸಣಾ ಶಿಬಿರ ನಡೆಸಲಾಗುವುದು ಎಂಜು ತಿಳಿಸಿದರು.
ವೈದ್ಯರಾದ ಅಚ್ಚಯ್ಯ, ಪವನ್ ಉಪಸ್ಥಿತರಿದ್ದರು. ರಘುನಂದನ್ ಸ್ವಾಗತಿಸಿ, ಸುಧೀರ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement